25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲದಲ್ಲಿ ನಡೆದಿರುವುದು ವಾಮಾಚಾರ ಅಲ್ಲ, ದೋಷ ಪರಿಹಾರದ ಪೂಜೆ

ಲಾಯಿಲ: ಇಲ್ಲಿಯ ಬಜಕ್ರೆಸಾಲು ಎಂಬಲ್ಲಿ ಸೋಮವತಿ ನದಿಯ ನೀರಿನಲ್ಲಿ ಬಾಳೆ ಎಲೆ, ಹೂ ಸಹಿತ ಪೂಜೆಗೆ ಬಳಸಿದ ವಸ್ತುಗಳು ಮೇ.18 ರಂದು ಕಂಡು ಬಂದಿದೆ.

ಇದರಿಂದ ಸ್ಥಳೀಯರು ಭಯಭೀತಗೊಂಡಿದ್ದರು. ಅದರೆ ಇದು ಸುಳ್ಳು ಸುದ್ದಿಯಾಗಿದ್ದು ವಾಸ್ತವವಾಗಿ ವಾಮಾಚಾರ ಮಾಡಿದ್ದಲ್ಲ ಸ್ಥಳೀಯ ಮನೆಯವರು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೋಷ ಪರಿಹಾರಕ್ಕಾಗಿ ಮಾಡಿದ ಪೂಜೆಯ ವಸ್ತುಗಳನ್ನು ಬಿಸಾಕಲಾಗಿದ್ದು. ಇದನ್ನೇ ತಪ್ಪಾಗಿ ಬಿಂಬಿಸಿ ವಾಮಾಚಾರ ಎಂದು ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ. ಇಲ್ಲಿ ಯಾವುದೇ ವಾಮಾಚಾರ ನಡೆದಿಲ್ಲ ಸಾರ್ವಜನಿಕರು ಸುಳ್ಳು ಸುದ್ದಿಯಿಂದ ಭಯಪಡದೇ ತಪ್ಪು ಅರ್ಥೈಸಿಕೊಳ್ಳಬಾರದು ಎಂದು ಸ್ಥಳೀಯರು ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಪರಿಶೀಲಿಸದೇ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಬಾರದು, ಇದರಿಂದ ಜನರು ಭಯಭೀತರಾಗಿ ಆತಂಕಕ್ಕೊಳಗಾಗುತ್ತಾರೆ. ಒಂದು ವೇಳೆ ಗಮನಕ್ಕೂ ಬಂದರೂ ಪಂಚಾಯತ್ ಅಥವಾ ಸ್ಥಳೀಯ ಜನಪ್ರತಿನಿಧಿಗಳ, ಪೊಲೀಸರ  ಗಮನಕ್ಕೆ ತರುವಂತೆ ವಿನಂತಿಸಿದ್ದಾರೆ.

Related posts

ಮೇ 21: ಉತ್ಕೃಷ್ಠ ಸೇವೆಯೊಂದಿಗೆ ಮುನ್ನಡೆಯುತ್ತಿರುವ ಗುರುದೇವ ಸಹಕಾರ ಸಂಘದ ಮೂಡಬಿದಿರೆ ಶಾಖೆ ಶುಭಾರಂಭ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ರೂ.2 ಲಕ್ಷ ದೇಣಿಗೆ

Suddi Udaya

ಮಹಿಳೆಯ ಬ್ಯಾಗ್ ನಲ್ಲಿ ಇರಿಸಿದ್ದ ರೂ. 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಕಾಂತರಾಜ್ ವರದಿ ಬಿಡುಗಡೆ, ಮುಸ್ಲಿಮ್ ಮೀಸಲಾತಿ ಶೇ.8ಕ್ಕೆ ಏರಿಸಲು ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಎಂಎಲ್‌ಸಿ ಹರೀಶ್ ಕುಮಾರ್‌ಗೆ ಮನವಿ

Suddi Udaya

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಾಲಯದ ಗೋಶಾಲೆಯಲ್ಲಿ ಗೋಪೂಜೆ

Suddi Udaya
error: Content is protected !!