ಶಿಬಾಜೆ: ಇಲ್ಲಿಯ ಬರ್ಗುಳದ ಶೀನ ಎಂಬವರ ಮನೆ ಸಮೀಪ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ಮೇ 20 ರಂದು ನಡೆದಿದೆ.
ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿ ಶವ ಮೇಲೇತ್ತುವ ಪ್ರಯತ್ನ ನಡೆಸುತ್ತಿದ್ದಾರೆ.
ಶವವೂ ಕೊಳೆತ ಸ್ಥಿತಿಯಲ್ಲಿದ್ದು ಪರಿಚಿತರೋ ಅಥವಾ ಅಪರಿಚಿತರೋ ಎಂದು ತನಿಖೆಯಿಂದ ತಿಳಿದುಬರಬೇಕಾಗಿದೆ. ಕಳೆದ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಶವ ಬೇರೆ ಕಡೆಯಿಂದ ತೇಲಿ ಬಂದಿರಬಹುದೇ ಎಂದು ಶಂಕಿಸಲಾಗಿದೆ.