ಬೆಳ್ತಂಗಡಿ: ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಬೆಳ್ತಂಗಡಿ ೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಧರ್ಮಸ್ಥಳ 33/11 ವಿದ್ಯುತ್ ಸರಬರಾಜು ಲೈನಿನ ೩೩ ಕೆವಿ ಧರ್ಮಸ್ಥಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಧರ್ಮಸ್ಥಳ, ಕನ್ಯಾಡಿ ಪುದುವೆಟ್ಟು, ನಿಡ್ಲೆ, ಪಟ್ರಮೆ, ಅರಸಿನಮಕ್ಕಿ 11 ಫೀಡರ್ ನಿಂದ ಸರಬರಾಜು ಆಗುವ ಸ್ಥಳಗಳಲ್ಲಿ ಮೇ 22 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ.
ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11ಕೆವಿ ಕುವೆಟ್ಟು, ಲಾಯಿಲ, ಬಂಗಾಡಿ ಮತ್ತು ಕೊಲ್ಲಿ ಪೀಡರುಗಳ ಹೆಚ್.ಟಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಬೆಳಿಗ್ಗೆ 10 ರಿಂದ ಸಂಜೆ 5.30 ರ ತನಕ ಚರ್ಚ್ ರೋಡ್, ಸಂತೆಕಟ್ಟೆ, ಬೆಳ್ತಂಗಡಿ ಪೇಟೆ, ಹುಣ್ಸೆಕಟ್ಟೆ, ಲಾಯಿಲ, ಬಂಗಾಡಿ, ನಾವೂರು, ಇಂದಬೆಟ್ಟು, ಕೊಲ್ಲಿ, ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.