ನಾವೂರು: ಕೇಂದ್ರ ಮುದ್ರಸವಾದ ನೂರುಲ್ ಹುದಾ ಮುರ ಮದ್ರಸ ಸಭಾಂಗಣದಲ್ಲಿ ರೇಂಜ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಪಿಚಲಾರ್ ರವರ ಘನ ಅಧ್ಯಕ್ಷತೆಯಲ್ಲಿ ಮುಫತ್ತಿಸ್ ಹಾಫಿಝ್ ಹನೀಫ್ ಮಿಸ್ಬಾಹಿ ಯವರ ಉದ್ಘಾಟನೆಯೊಂದಿಗೆ ಚಾಲನೆಗೊಂಡಿತು.
ಕಾರ್ಯಕ್ರಮದಲ್ಲಿ ಕಾಜೂರು ಸದರ್ ಉಸ್ತಾದ್ ಅಬ್ದುಲ್ ರಹೀಂ ಹನೀಫೀ ಅಲ್ ಫುರ್ಖಾನಿ ಖಿರಾಅತ್ ಪಠಿಸಿದರು. ರೇಂಜ್ ಕಾರ್ಯದರ್ಶಿ ಶರೀಫ್ ಸಅದಿ ಪೆರ್ದಾಡಿ ಸ್ವಾಗತಿಸಿದರು.ನಂತರ ಆರ್.ಓ ಆಗಿ ಬಂದಂತಹ ಅಬ್ದುಲ್ ಹಮೀದ್ ಸಅದಿ ಯವರ ನೇತೃತ್ವದಲ್ಲಿ 2025 ರಿಂದ 2028ರ ಅವಧಿಯ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು ಸಿರಾಜುದ್ದೀನ್ ಸಖಾಫಿ ಪಿಚಲಾರ್, ಪ್ರದಾನ ಕಾರ್ಯದರ್ಶಿ ಅಬ್ದುರ್ರಝಾಖ್ ಇಂದಾದಿ ಪುತ್ರಬೈಲ್, ಕೋಶಾಧಿಕಾರಿ ಅಬ್ದುಲ್ ರಹೀಂ ಹನೀಫೀ ಅಲ್ ಫುರ್ಖಾನಿ ಕಾಜೂರು, ಐಟಿ, ಎಕ್ಸಾಂ & ವೆಲ್ಫೇರ್ ಉಪಾಧ್ಯಕ್ಷರು ಮುಹಮ್ಮದ್ ಝಬೈರ್ ಸಅದಿ ಎರ್ಮಾಲ, ಕಾರ್ಯದರ್ಶಿ ಅಬ್ದುಲ್ ಹಮೀದ್ ಝಹ್ರಿ ಮುರ, ಮ್ಯಾಗಝೀನ್ ಉಪಾಧ್ಯಕ್ಷರು ಅಬೂಸ್ವಾಲಿಹ್ ಝೈನಿ ಕೇಲ್ತಾಜೆ, ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಅದಿ ಕಿಲ್ಲೂರು, ಮಿಷನರಿ ಟ್ರೈನಿಂಗ್ ಉಪಾಧ್ಯಕ್ಷರು ಅಬೂಬಕ್ಕರ್ ಸಿದ್ದೀಕ್ ಸಖಾಫಿ ನಿರಿಂದಿ, ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಅಮಾನಿ ಕುಕ್ಕಾವು, ಪಿಂಚಣಿ & ಕ್ಷೇಮ ನಿಧಿ ಉಪಾಧ್ಯಕ್ಷರು ಬಶೀರ್ ಸಅದಿ ಮುರ, ಕಾರ್ಯದರ್ಶಿ ಮುಹಮ್ಮದ್ ಸಿನಾನ್ ರಝ್ವಿ ದಿಡುಪೆ, ಹಾಗೂ ಉಳಿದ ಎಲ್ಲಾ ಸದರ್ ಉಸ್ತಾದರಗಳನ್ನು ಎಕ್ಸಿಕ್ಯೂಟಿವ್ ಮೆಂಬರ್ ಗಳಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುರ ಮಸೀದಿಯ ಅಧ್ಯಕ್ಷರು ಹಸೈನಾರ್ ಹಾಗೂ ಉಪಾಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್ ರವರು ಉಪಸ್ಥಿತರಿದ್ದರು.
ಹಲವು ವರ್ಷಗಳಿಂದ ರೇಂಜಿನಲ್ಲಿ ಸೇವೆಗೈದು ಇದೀಗ ರೇಂಜ್ ನಿಂದ ನಿರ್ಗಮಿಸಿದ ಅಬ್ದುಲ್ ರಶೀದ್ ಮದನಿಯವರನ್ನು ಹಾಗೂ ಪಬ್ಲಿಕ್ ಪರೀಕ್ಷೆಯಲ್ಲಿ ಎ+ ಪಡೆದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಮೆಮೊಂಟ್ ನೀಡಿ ಸನ್ಮಾನಿಸಲಾಯಿತು. ನಂತರ ಧನ್ಯವಾದ ವಿತ್ತರು.