September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

ಅರಸಿನಮಕ್ಕಿ : ಶಿವಾನಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಅರಸಿನಮಕ್ಕಿ ಇದರ ಮಹಾಸಭೆಯನ್ನು ಸೆ.17 ರಂದು ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಪ್ರತಿಮ ರವರ ಅಧ್ಯಕ್ಷತೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ಶ್ರೀ ಹಾಗೂ ತಾಲೂಕು ಬ್ಲಾಕ್ ಮ್ಯಾನೇಜರ್ ನಿತೇಶ್ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಮೃದ್ಧಿ ಸಂಘದ ಸದಸ್ಯರು ಪ್ರಾರ್ಥನೆ ಮಾಡಿದರು ಹೇಮಲತಾ ಸ್ವಾಗತಿಸಿದರು. ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಜಯರಾಜ, ಪಂಚಾಯಿತಿ ಸದಸ್ಯರಾದ ಶ್ರೀಮತಿ ಸೌಮ್ಯ ತುಳುಪುಳೆ ಹಾಗೂ ಒಕ್ಕೂಟದ ಕಾರ್ಯದರ್ಶಿಯಾದ ಶ್ರೀಮತಿ ಆಶಾ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನೀತಾ ರವರು 2024-25 ರ ವಾರ್ಷಿಕ ವರದಿ ಮಂಡನೆ ಮಾಡಿದರು.ಕು ಅಮಿತಾ 2024-25 ಖರ್ಚು ವೆಚ್ಚ ಹಾಗೂ ಆಸ್ತಿ ಜವಾಬ್ದಾರಿ ಯನ್ನು ಮಂಡಿಸಿದರು. ತಾಲೂಕಿನ ಬ್ಲಾಕ್ ಮ್ಯಾನೇಜರ್ ನಿತೇಶ್ ಮಾತಾಡಿ ಒಕ್ಕೂಟ ರಚನೆ, ರಿಜಿಸ್ಟ್ರೇಷಣೆ PMFME, PMSBY, PMJJBY, ಉದ್ಯಮ ಕಾರ್ಡ್ FSSI, ಅಕ್ಕ ಕೆಫೆ, ಅಕ್ಕ ಟ್ರಕ್ ಕಾಫಿ ಕ್ಯೂಸ್ ವೈಯಕ್ತಿಕ ಬ್ಯಾಂಕ್ ಲೋನ್ ನ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವೀಣಾ ಶ್ರೀ ಮಾತಾಡಿ ಕೌಶಲ್ಯಾಭಿವೃದ್ಧಿಯ ಬಗ್ಗೆ ಒಕ್ಕೂಟದ ಮಹಾಸಭೆ ಬಗ್ಗೆ ಸಂಘದ ಅಧ್ಯಕ್ಷ ಕಾರ್ಯದರ್ಶಿ ಜವಾಬ್ದಾರಿಯ ಬಗ್ಗೆ ಒಕ್ಕೂಟ ಪದಾಧಿಕಾರಿಗಳ ಬದಲಾವಣೆ ಮಾಡಿ ಒಕ್ಕೂಟ ರಚನೆ ಮಾಡಿದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತಾಡಿ ಸ್ವಚ್ಛತಾ ಆಂದೋಲನ ಪ್ರತಿ ವಾರ್ಡ್ ಗಳಲ್ಲಿ, ಮನೆಗಳಲ್ಲಿ ಮಾಡುವ ಬಗ್ಗೆ ಹೇಳಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಅರಸಿನಮಕ್ಕಿ ಬ್ಯಾಂಕಿನ ಸಿಬ್ಬಂದಿಯಾದ ವಂದನ್ ಅವರು ವೈಯುಕ್ತಿಕ ಲೋನಿನ ಬಗ್ಗೆ, PMJJY, PMJJBY, APY ಬಗ್ಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸದಸ್ಯರಿಗೆ ನೀಡಿದರು.

PHCO ಯಾದ ಪುಟ್ಟಮ್ಮ ಸಿಸ್ಟರ್ ಅವರು ಪೌಷ್ಟಿಕ ಆಹಾರಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆ ಲಿಂಗತ್ವದ ಬಗ್ಗೆ ಒಕ್ಕೂಟದ ಸದಸ್ಯರಿಗೆ ಮಾಹಿತಿ ನೀಡಿದರು. ಆ ಸಂದರ್ಭದಲ್ಲಿ ಹತ್ಯಡ್ಕ ಗ್ರಾಮದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಕವಿತಾ ಶ್ರೀಮತಿ ಸರೋಜಿನಿ ಶ್ರೀಮತಿ ಪಾರ್ವತಿ CHO ಗಳಾದ ಅಂಬಳಿ ಜೋಕಬೋ ಮತ್ತು ಮಿನಿ ಉಪಸಿತರಿದ್ದು ಉಪಸ್ಥಿತರಿದ್ದ ಸದಸ್ಯರ ಶುಗರ್ ಟೆಸ್ಟ್ ಬಿಪಿ ಟೆಸ್ಟ್ ಮಾಡಿಸಿದರು ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾವಿಧಿಯನ್ನು ವಾದಿಸಲಾಯಿತು ಸಭೆಯಲ್ಲಿ ಸಂಜೀವಿನಿ ಗೀತೆಯನ್ನು ಹಾಡಲಾಯಿತು . ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಭಾಗವಹಿಸದರು. ಬಿಸಿ ಸಖಿ ರೇವತಿ ನಿರೂಪಣೆ ಮಾಡಿದರು. ಕೃಷಿ ಉದ್ಯೋಗ ಸಖಿ ಯಾದ ಗೀತಾ ಇವರ ಧನ್ಯವಾದವಿತ್ತರು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರದ ಆಭರಣಗಳ ಶೋರೂಮ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಮ್; ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ ದೀಪ ಪ್ರಜ್ವಲಿಸಿ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : ಹದಿನಾಲ್ಕನೇ ಸುತ್ತಿನಲ್ಲಿ 13611 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಉದಯವಾಣಿ ಪತ್ರಿಕೆಯ ಮಡಂತ್ಯಾರು ವಲಯದ ಬಿಡಿ ವರದಿಗಾರ ರಾಗಿ ಕೆ.ಎನ್ ಗೌಡ ನೇಮಕ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ. ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಸ್ಕೂಟಿಗೆ- ಆಟೋ ರಿಕ್ಷಾ ಡಿಕ್ಕಿ ಪ್ರಕರಣ: ಆಟೋ ಚಾಲಕನಿಗೆ ಕಾರಾಗೃಹ ಶಿಕ್ಷೆ ಪ್ರಕಟ

Suddi Udaya
error: Content is protected !!