26.5 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ ಮೋಕ್ಷಧಾಮ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಗೇರುಕಟ್ಟೆ: ಕಳಿಯ-ನ್ಯಾಯತರ್ಪು ಹಿಂದೂ ರುದ್ರಭೂಮಿ ಸೇವಾ ಸಮಿತಿ ಹಾಗೂ ಕಳಿಯ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಮೋಕ್ಷಧಾಮ ಲೋಕಾರ್ಪಣಾ ಸಭಾ ಕಾರ್ಯಕ್ರಮ ಮೇ. 21 ರಂದು ಗೇರುಕಟ್ಟೆ ಪೇಟೆಯಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಮೋಕ್ಷಧಾಮ ಲೋಕಾರ್ಪಣೆಗೊಳಿಸಿದರು. ಕಳಿಯ ಗ್ರಾ.ಪಂ.ಅಧ್ಯಕ್ಷ ದಿವಾಕರ ಎಂ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಕಿರಣ್‌ಚಂದ್ರ ಡಿ ಪುಷ್ಪಗಿರಿ, ಮಂಗಳೂರು ಜೆ.ಎಂ.ಜೆ.ಕನ್ಟçöಕ್ಷನ್ ಮತ್ತು ಫೈನಾನ್ಸ್ ಜಾನ್ ಸುರೇಶ್, ಬೆಳ್ತಂಗಡಿ ಶ್ರೀ.ಕ್ಷೇತ್ರ.ಧ.ಗ್ರಾ.ಯೋ. ಯೋಜನಾಧಿಕಾರಿ ಯಶೋಧರ ಹಾಗೂ ಪಿಡಿಒ ಸಂತೋಷ್ ಪಾಟೀಲ್ ಸಹಿತ ಮೋದಲಾದವರು ಭಾಗವಹಿಸಿದ್ದರು.

ಕಳಿಯ ಗ್ರಾ.ಪಂ.ಉಪಾಧ್ಯಕ್ಷೆ ಇಂದಿರಾ ಸದಸ್ಯರಾದ ವಿಜಯ ಗೌಡ. ಹರೀಶ್. ಯಶೋಧರ್ ಶೆಟ್ಟಿ. ಸುಭಾಷಿಣಿ. ಕುಸುಮ, ಸುಧಾಕರ್ ಮಜಲು. ಅಬ್ದುಲ್ ಕರೀಂ, ಮರಿಟಾ ಪಿಂಟೊ, ಶ್ವೇತಾ ಶ್ರೀನಿವಾಸ್ , ಕಳಿಯ ಪ್ರಾರ್ಥಮಿಕ ಕೃಷ್ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ. ನಿರ್ದೇಶಕರಾದ ಕೇಶವ ಪೂಜಾರಿ ಹಾಗೂ ಕುಶಾಲಪ್ಪ ಗೌಡ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ, ಹಿಂದೂ ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ಕೇಶವ ಬಂಗೇರ .ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ನೆಲ್ಲಿಕಟ್ಟೆ, ಉಮೇಶ್ ಶೆಟ್ಟಿ, ಸಂಬೋಳ್ಯ, ಉಮೇಶ್ ಕೇಲ್ದಡ್ಕ, ಪ್ರಕಾಶ್ ಮೇರ್ಲ, ಕಾರ್ಯದರ್ಶಿ ಲೋಕೇಶ್ ಕುಮಾರ್ ಎನ್, ಜೊತೆ ಕಾರ್ಯದರ್ಶಿ ಸತೀಶ್ ಭಂಡಾರಿ ನಾಳ ಹಾಗೂ ರಂಜನ್ ಹೆಚ್. ಕೋಶಾಧಿಕಾರಿ ಶೇಖರ್ ನಾÊಕ್ ಗೇರುಕಟ್ಟೆ, ಪ್ರಧಾನ ಸಂಚಾಲಕರಾದ ಕರುಣಾಕರ ಶೆಟ್ಟಿ ಕೊರಂಜ, ಸಂಚಾಲಕರು ವಸಂತ ಶೆಟ್ಟಿ ಮಾವಿನಕಟ್ಟೆ, ಬಾಲಕೃಷ್ಣ ಗೌಡ, ಬಿರ್ಮೊಟ್ಟು ಹಾಗೂ ಸಾಮಾಜಿಕ ಜಾಲತಾಣ ಪುರಂದರ ಗೇರುಕಟ್ಟೆ ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಳಿಯ-ನ್ಯಾಯತರ್ಪ್ಪು ಗ್ರಾಮಸ್ಥರು ಹಾಜರಿದ್ದರು.

ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಗೊಂಡಿತು. ನ್ಯಾಯತರ್ಪ್ಪು ಗ್ರಾಮ ವ್ಯಾಪ್ತಿಯನ್ನು ಗುರಿಯಾಗಿಸಿ ಕೊಂಡು ಸರಕಾರದ ಅಧೀನದಲ್ಲಿ ಮಂಜೂರಾದ ಅಂದಾಜು ೦.55 ಸೆಂಟ್ಸ್ ಜಾಗದಲ್ಲಿ ಸುಮಾರು 25 ಲಕ್ಷದಲ್ಲಿ ವೆಚ್ಚದಲ್ಲಿ ಹಿಂದೂ ರುದ್ರ ಭೂಮಿಯ ರಚನೆಯ ಕಾರ್ಯಕ್ಕೆ ಕಳೆದ ಮೂರು ವರ್ಷಗಳ ಹಿಂದೆ ಶಾಸಕ ಹರೀಶ್ ಪೂಂಜಾ ಶಿಲನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ರುದ್ರಭೂಮಿ ಅನ್ನುವುದು ಕೇವಲ ಸ್ಮಶಾನ ಅಲ್ಲ. ಹೆಣಸುಡುವುದಕ್ಕೆ ಮಾತ್ರ ಸೀಮಿತವಾಗದೆ ಹಿಂದೂ ಧರ್ಮದ ಶ್ರದ್ಧಾ, ಮೋಕ್ಷ ಪುಣ್ಯ ಧಾಮ ಕೇಂದ್ರವಾಗಿ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರ ಅಭಿಪ್ರಾಯವಾಗಿದೆ. ಮಾತ್ರವಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶವ ಸುಡುವ ಸ್ಟೀಮರ್, ಶವಾಗಾರಕ್ಕೆ ನೀಡಲಾಗಿದೆ. ಕಳಿಯ ಗ್ರಾಮ ಪಂಚಾಯತ್ ನರೇಗಾ ಯೋಜನೆಯಡಿ ಅನುದಾನ ಕಟ್ಟಡ ರಚನೆ, ಎರಡು ಕೊಠಡಿ ಅಂದಾಜು 4 ಲಕ್ಷ ರೂಪಾಯಿ ಅನುದಾನ ಶಾಸಕರ ನಿಧಿ,ಸ್ಮಶಾನದ ಹೆಬ್ಬಾಗಿಲನ್ನು ಕಳಿಯ ಸಿ.ಎ.ಬ್ಯಾಂಕು ಮತ್ತು ದಾನಿ ಸಹಕಾರದಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೇಶವ ಬಂಗೇರ ಬಿ.ತಿಳಿಸಿದ್ದಾರೆ.

Related posts

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ “ಸಿರಿ ಕ್ಲಬ್” ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿತುಳು ನಾಡು-ನುಡಿ-ಸಂಸ್ಕೃತಿ ಒರಿಪಾವುನ ಬುಳೆಪಾವುನ ಮಾರ್ಗೋಪಾಯೊಲು” ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಉಪ್ಪಿನಂಗಡಿಯಲ್ಲಿರುವ ಬಟ್ಟೆ ಮಳಿಗೆಗೆ ಬೆಂಕಿ

Suddi Udaya

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya

ತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆಯ ಬಳಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಉಜಿರೆ : ಅಮರ ಕವಿ ವಾಲ್ಮೀಕಿ ವಿಶೇಷ ಉಪನ್ಯಾಸ

Suddi Udaya
error: Content is protected !!