ಧರ್ಮಸ್ಥಳ: ಪಂಜಾಬ್ ನಲ್ಲಿ ಕಟ್ಟಡದ ಮೇಲಿನಿಂದ ಜಿಗಿದು ಸಾವನ್ನಪ್ಪಿದ ಅಕಾಂಕ್ಷಾ ಅವರ ಮೃತದೇಹ ಧರ್ಮಸ್ಥಳದ ಬೋಳಿಯಾರು ಮನೆಗೆ ಬೆಳಗ್ಗೆ ತಲುಪಿದ್ದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸ್ವಾಂತಾನ ನೀಡಿದರು.


ತಂದೆ ಸುರೇಂದ್ರನ್ ಅವರ ಸಹೋದರ ಪ್ರಕಾಶ್ ಅವರ ಮನೆಗೆ ಮೃತದೇಹ ತರಲಾಗಿದ್ದು ಅಲ್ಲೇ ಅಂತಿಮ ವಿಧಿ ವಿಧಾನಗಳು ನಡೆದು ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಲಾಗಿದೆ.

ಮೃತದೇಹದ ಅಂತಿಮ ವೀಕ್ಷಣೆಗಾಗಿ ಮನೆಯ ಅಂಗಳದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.