ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀ ಪಾದಂಗಳವರು ಇತ್ತೀಚೆಗೆ ಭೇಟಿ ನೀಡಿದರು. ಸ್ವಾಮೀಜಿಯವರು ದೇವರಿಗೆ ವಿಶೇಷ ಮಂಗಳಾರತಿ ಮಾಡಿ ಬಳಿಕ ಆಶೀರ್ವಚನ ನೀಡಿದರು. ದೇವಸ್ಥಾನದ ಸಮಿತಿ ವತಿಯಿಂದ ಇವರನ್ನು ಭವ್ಯ ಸ್ವಾಗತಿಸಲಾಯಿತು.

ದೇವಸ್ಥಾನದ ಆಡಳಿತ ಮೊಕ್ತಸರ ಜೀವಂದರ ಜೈನ್ ಬೆಳಾಲು ಗುತ್ತು, ಅಸ್ರನ್ನ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಕೊಲ್ಪಾಡಿ ರಾಜರಾಮ ಶರ್ಮ, ಗಿರಿರಾಜ ಬಾರಿತ್ತಾಯ ಮಾಚಾರು, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ, ಮಹಿಳಾ ಸಮಿತಿಯ ಸಂಚಾಲಕಿ ಹೇಮಲತಾ ಶ್ರೀನಿವಾಸ ಗೌಡ, ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಪೊಸೊಟ್ಟು, ನಿಕಟ ಪೂರ್ವ ಅಧ್ಯಕ್ಷ ನವೀನ, ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಪ್ರದಾನ ಸಂಚಾಲಕರು, ಸಂಚಾಲಕರು ಊರವರು, ಭಕ್ತರು ಹಾಜರಿದ್ದರು.