25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ ಆಚರಣೆ

ಪುತ್ತೂರು: ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ವನ್ನು ಕಾಲೇಜಿನ ಸ್ಪಂದನ ಸಭಾಂಗಣ ದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ|| ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡುತ್ತಾ “ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯ ಮೂಡಿಸುವುದು ಭಯೋತ್ಪಾದನಾ ವಿರೋಧಿ ದಿನಾಚರಣೆಯ ಧ್ಯೇಯವಾಗಿದೆ. ವಿದ್ಯರ‍್ಥಿಗಳು ಹಿಂಸಾತ್ಮಕ ಚಟುವಟಿಕೆಗಳನ್ನು ಬೆಂಬಲಿಸದೆ ರಾಷ್ಟ್ರದ ಅಭ್ಯುದಯದತ್ತ ಗಮನವೀಯಬೇಕು. ಕ್ರೌರ್ಯತೆಗೆ ಯಾವುದೇ ಜಾತಿ, ಧರ್ಮ ಗಳ ಹಂಗಿಲ್ಲ. ವಿವೇಕದ ಅರಿವು ನಮ್ಮಲ್ಲಿ ಜಾಗೃತವಾದಾಗ ಮಾತ್ರ ಭಯೋತ್ಪಾದನೆಯ ನಿರ್ಮೂಲನೆ ಸಾಧ್ಯ.”ಎಂದು ನುಡಿದರು.

ಪ್ರಾಂಶುಪಾಲರು ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಕಾರ್‍ಯಕ್ರಮವನ್ನುಅರ್ಥಪೂರ್ಣವಾಗಿಸಿದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ||ವಿಜಯ ಕುಮಾರ್ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ||ರಾಧಾಕೃಷ್ಣ ಗೌಡ ಅವರು ಸ್ವಾಗತಿಸಿ, ಕಾಲೇಜಿನ ಯಕ್ಷಕಲಾ ಕೇಂದ್ರದ ನಿರ್ದೇಶಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.

Related posts

ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ನಾಲ್ಕೂರು: ಕುದ್ರೋಟ್ಟು ಬೊಕ್ಕಸ ಪರಿಸರದಲ್ಲಿ ಕಾಡುಕೋಣ ಚಿರತೆ ಹಾವಳಿ: ಕರುಣಾಕರ ಹೆಗ್ಡೆಯವರ ಬೇಡಿಕೆಗೆ ಸ್ಪಂದಿಸಿ ದಾರಿದೀಪ ಅಳವಡಿಸಿದ ಬಳಂಜ ಗ್ರಾ.ಪಂ.

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25 ಸಾವಿರ ಸಹಾಯಧನ ವಿತರಣೆ

Suddi Udaya

ಚಾರ್ಮಾಡಿ: ಅಂಗನವಾಡಿ ಸಹಾಯಕಿ ಆತ್ಮಹತ್ಯೆ

Suddi Udaya

ಪ್ರಧಾನಿಯಾಗಿ ನರೇಂದ್ರಮೋದಿಯವರ ಪ್ರಮಾಣ ವಚನ: ಇಂದಬೆಟ್ಟುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Suddi Udaya

ಮುಂಡಾಜೆ ಕೀರ್ತನ ಕಲಾತಂಡದಿಂದ ‘ಆಟಿಡೊಂಜಿ ಐತಾರಾ’ ಕಾರ್ಯಕ್ರಮ

Suddi Udaya
error: Content is protected !!