ತಣ್ಣೀರುಪಂತ: ಪೊಸಂದೋಡಿ ಹರಿಕೃಪ ನಿವಾಸಿ ಶ್ರೀಮತಿ ಜಾಜೀವಿ ಮತ್ತು ಪಿ ದುಗ್ಗಪ್ಪ ಗೌಡ ರವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮದ ಪ್ರಯುಕ್ತ ಮೇ 25 ರಂದು ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ಸಹಸ್ರ ಚಂದ್ರದರ್ಶನ ಶಾಂತಿ ಹಾಗೂ ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಚನ ನಡೆಯಲಿರುವುದು.
ಬೆಳಿಗ್ಗೆ 10.30ಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಅವರ ಜೋಶ್ ತುಂಬುವ ಹಾಸ್ಯ ಸ್ಪಂದನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ , ಮಧ್ಯಾಹ್ನ 12.00 ಗಂಟೆಗೆ ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಗೆ ಭವ್ಯ ಸ್ವಾಗತ, 50ನೇ ವರ್ಷದ ಸಂಭ್ರಮದಲ್ಲಿರುವ ದಂಪತಿಯಿಂದ ಶ್ರೀ ಸ್ವಾಮೀಜಿಯವರ ಪಾದಪೂಜೆ ಸ್ವಾಮೀಜಿಯವರಿಂದ ದಂಪತಿ ಮಂಗಳಮಯ ಆಶೀರ್ವಚನ ನಡೆಯಲಿದೆ.