25.5 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ ಆಚರಣೆ

ಪುತ್ತೂರು: ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ವನ್ನು ಕಾಲೇಜಿನ ಸ್ಪಂದನ ಸಭಾಂಗಣ ದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ|| ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡುತ್ತಾ “ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯ ಮೂಡಿಸುವುದು ಭಯೋತ್ಪಾದನಾ ವಿರೋಧಿ ದಿನಾಚರಣೆಯ ಧ್ಯೇಯವಾಗಿದೆ. ವಿದ್ಯರ‍್ಥಿಗಳು ಹಿಂಸಾತ್ಮಕ ಚಟುವಟಿಕೆಗಳನ್ನು ಬೆಂಬಲಿಸದೆ ರಾಷ್ಟ್ರದ ಅಭ್ಯುದಯದತ್ತ ಗಮನವೀಯಬೇಕು. ಕ್ರೌರ್ಯತೆಗೆ ಯಾವುದೇ ಜಾತಿ, ಧರ್ಮ ಗಳ ಹಂಗಿಲ್ಲ. ವಿವೇಕದ ಅರಿವು ನಮ್ಮಲ್ಲಿ ಜಾಗೃತವಾದಾಗ ಮಾತ್ರ ಭಯೋತ್ಪಾದನೆಯ ನಿರ್ಮೂಲನೆ ಸಾಧ್ಯ.”ಎಂದು ನುಡಿದರು.

ಪ್ರಾಂಶುಪಾಲರು ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಕಾರ್‍ಯಕ್ರಮವನ್ನುಅರ್ಥಪೂರ್ಣವಾಗಿಸಿದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ||ವಿಜಯ ಕುಮಾರ್ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ||ರಾಧಾಕೃಷ್ಣ ಗೌಡ ಅವರು ಸ್ವಾಗತಿಸಿ, ಕಾಲೇಜಿನ ಯಕ್ಷಕಲಾ ಕೇಂದ್ರದ ನಿರ್ದೇಶಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.

Related posts

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮ

Suddi Udaya

ಪಿಕಫ್ ಚಾಲಕ ಸತೀಶ್ ಕುಲಾಲ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಅತ್ಯಮೂಲ್ಯ ಮತ ಚಲಾಯಿಸಿದ 106 ವರ್ಷದ ಅಜ್ಜಿ:

Suddi Udaya
error: Content is protected !!