23.3 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಡಿಕೆ ಎಲೆಚುಕ್ಕಿ ರೋಗ: ರೈತರಿಗೆ ಸಹಾಯಧನ ನೀಡಲು ಶಿಫಾರಸ್ಸು ಅರ್ಜಿ ಸಲ್ಲಿಕೆಗೆ ಸೂಚನೆ

ಬೆಳ್ತಂಗಡಿ: ತಾಲೂಕಿನಾದ್ಯಂತ ಅಡಿಕೆ ಎಲೆಚುಕ್ಕೆ ಬಾಧೆ ತೀವ್ರವಾಗಿ, ಅಡಿಕೆ ಬೆಳೆಯ ಉತ್ಪಾದಕತೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಜ್ಞಾನಿಕ ಸಮಿತಿ ರಚಿಸಿ ರೈತರಿಗೆ ಸಹಾಯವಾಗುವಂತೆ ಸಹಾಯಧನ ನೀಡಲು ಶಿಫಾರಸ್ಸು ಮಾಡಿದೆ. ಅದರಂತೆ ರೈತರು ಅಡಿಕೆ ಎಲೆಚುಕ್ಕೆ ರೋಗ ಸಮಗ್ರ ನಿರ್ವಹಣೆಗೆ ಶೇ.30ರ ಸಹಾಯಧನದಂತೆ ರೈತರು ಖರೀದಿ ಮಾಡಿದ ಶಿಲೀಂದ್ರನಾಶಕ/ಪೋಷಕಾಂಶಗಳ ಜಿ ಎಸ್ ಟಿ ನಮೂದು ಹೊಂದಿದ ಮತ್ತು ಎ. 2025ರ ನಂತರ ಖರೀದಿಸಿರುವ ಬಿಲ್ಲುಗಳನ್ನು ಯೋಜನೆಯ ಮಾರ್ಗಸೂಚಿಯಂತೆ ನಿಗದಿಪಡಿಸಿದ ಅರ್ಜಿ ಜೊತೆಗೆ ಬೆಳ್ತಂಗಡಿ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಜೊತೆಗೆ ಪಹಣಿ (RTC), ಆಧಾರ್ ಪ್ರತಿ. ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಎ. 2025ರ ನಂತರ ಖರೀದಿಸಿದ ಜಿ ಎಸ್ ಟಿ ಹೊಂದಿರುವ ಮೂಲ ಬಿಲ್ಲುಗಳನ್ನು ಸಲ್ಲಿಸುವುದು. ವರ್ಗವಾರು, ಅರ್ಜಿಗಳ ಜತೆಗನುಗುಣವಾಗಿ ತಾಲೂಕಿಗೆ ಹಂಚಿಕೆಯಾದ ಅನುದಾನದಂತೆ ಸಹಾಯಧನಕ್ಕೆ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಿದೆ.

ಬೆಳ್ತಂಗಡಿ ಹೋಬಳಿ : ಮಹಾವೀರ ಶೇಬಣ್ಣವರನೇ 8123921087, ವೇಣೂರು ಹೋಬಳಿ : ಭೀಮರಾಯ ಸೊಡಗಿ 9741713598 , ಕೊಕ್ಕಡ ಹೋಬಳಿ : ಮಲ್ಲಿನಾಥ ಬಿರಾದಾರ 9986411477, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು: ಕೆ.ಎಸ್.ಚಂದ್ರಶೇಖರ್, ಮೊಬೈಲ್ ನಂ: 9448336863.

Related posts

ಉಜಿರೆ : ಕುಸಿದು ಬಿದ್ದು ಅಪರಿಚಿತ ವ್ಯಕ್ತಿ ಸಾವು

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲೆಗೆ ಹಿದಾಯತುಲ್ಲಾ ಗೇರುಕಟ್ಟೆ ರವರಿಂದ ಮಿಕ್ಸರ್ ಗ್ರೈಂಡರ್ ಕೊಡುಗೆ

Suddi Udaya

ಆ.28 : ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳ ನೇಮಕ

Suddi Udaya

ಉಜಿರೆ: ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಹೊಸಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಂದ ಉದ್ಘಾಟನೆ

Suddi Udaya
error: Content is protected !!