23.5 C
ಪುತ್ತೂರು, ಬೆಳ್ತಂಗಡಿ
May 23, 2025
Uncategorized

ಬೆಳಾಲು : ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಉಡುಪಿ ಪೇಜಾವರ ಮಠದ ಸ್ವಾಮೀಜಿ ಭೇಟಿ, ಆಶೀರ್ವಚನ

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀ ಪಾದಂಗಳವರು ಇತ್ತೀಚೆಗೆ ಭೇಟಿ ನೀಡಿದರು. ಸ್ವಾಮೀಜಿಯವರು ದೇವರಿಗೆ ವಿಶೇಷ ಮಂಗಳಾರತಿ ಮಾಡಿ ಬಳಿಕ ಆಶೀರ್ವಚನ ನೀಡಿದರು. ದೇವಸ್ಥಾನದ ಸಮಿತಿ ವತಿಯಿಂದ ಇವರನ್ನು ಭವ್ಯ ಸ್ವಾಗತಿಸಲಾಯಿತು.

ದೇವಸ್ಥಾನದ ಆಡಳಿತ ಮೊಕ್ತಸರ ಜೀವಂದರ ಜೈನ್ ಬೆಳಾಲು ಗುತ್ತು, ಅಸ್ರನ್ನ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಕೊಲ್ಪಾಡಿ ರಾಜರಾಮ ಶರ್ಮ, ಗಿರಿರಾಜ ಬಾರಿತ್ತಾಯ ಮಾಚಾರು, ಬೆಳಾಲು ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ, ಮಹಿಳಾ ಸಮಿತಿಯ ಸಂಚಾಲಕಿ ಹೇಮಲತಾ ಶ್ರೀನಿವಾಸ ಗೌಡ, ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಪೊಸೊಟ್ಟು, ನಿಕಟ ಪೂರ್ವ ಅಧ್ಯಕ್ಷ ನವೀನ, ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಪ್ರದಾನ ಸಂಚಾಲಕರು, ಸಂಚಾಲಕರು ಊರವರು, ಭಕ್ತರು ಹಾಜರಿದ್ದರು.

Related posts

ಮಂಗಳೂರು ಬಂದರ್ ಠಾಣೆಗೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾಗಿ ಕೆ.ಡಿ. ಜಾರ್ಜ್ ಕಾಯರ್ತಡ್ಕ ಅಧಿಕಾರ ಸ್ವೀಕಾರ

Suddi Udaya

ಸುದ್ದಿ ಉದಯ ಫಲಶ್ರುತಿ: ಬಂದಾರು ಬೋಲೋಡಿ ಎಂಬಲ್ಲಿ ಗುಡ್ಡ ಕುಸಿತ ವರದಿ ಬೆನ್ನಲ್ಲೇ ಗ್ರಾ.ಪಂ. ನಿಂದ ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ

Suddi Udaya

ಬೆಳ್ತಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ಬ್ರಿಜೇಶ್ ಚೌಟ ಬೇಟಿ

Suddi Udaya

ಪಟ್ರಮೆ: ಬಲ್ಲಿದಡ್ಡ ನಿವಾಸಿ ಸುರೇಶ್ ಗೌಡ ಆತ್ಮಹತ್ಯೆ ಶಂಕೆ

Suddi Udaya

ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ : ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ: ಎಸ್.ಡಿ.ಪಿ.ಐ

Suddi Udaya

ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಸಾಯಿ ಡಿ ಜೆ ಸೌಂಡ್ಸ್ ಇವೆಂಟ್ಸ್ & ಎಲೆಕ್ಟ್ರಿಕಲ್, ಪ್ಲಮ್ಮಿoಗ್ ಹಾಗೂ ಸದಾಶಿವ ಶಾಮಿಯಾನ ಸರ್ವಿಸಸ್ ಅಂಗಡಿ ಹಾಗೂ ವಾಹನ ಪೂಜೆ

Suddi Udaya
error: Content is protected !!