ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ, ಜಿಲ್ಲೆಯ ಎಲ್ಲಾ ತಾಲೂಕು ಸಂಘಗಳ ಸಹಭಾಗಿತ್ವದಲ್ಲಿ 2024 ಆಗಸ್ಟ್ 30 ರಂದು ನೊಂದಾವಣೆಗೊಂಡು ಕಾರ್‍ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 2018 ರಲ್ಲಿ ದ.ಕ.ಜಿಲ್ಲಾ ಮಟ್ಟದಲ್ಲಿ ಸಂಘವೂ ರಚನೆಯಾಗಿ ನಂತರ ಸುಧೀರ್ಘ ಸಭೆ-ಬೈಲಾರಚನೆ ಮತ್ತು ಕೊರೋನಾದಂತಹ ರೋಗದ ತೊಂದರೆಗಳಿಂದಾಗಿ ಸಂಘವೂ ಪ್ರಾರಂಭದಲ್ಲಿ ವೇಗವನ್ನು ಪಡೆಯುವಲ್ಲಿ ವಿಳಂಬವಾಯಿತು.
ಈದೀಗ ನೊಂದಾವಣೆಗೊಂಡು ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಹಾಗೂ ಗೌರವ ಸಲಹೆಗಾರರ ತಂಡ ಸೇರಿ ಸಂಘಕ್ಕೆ 102 ಜನ ಪದಾಧಿಕಾರಿಗಳು ಇದ್ದು ಕಾರ್‍ಯಚರಿಸುತ್ತದೆ. ಜಿಲ್ಲಾ ಮಾತೃ ಸಂಘ(ರಿ)ವೂ ತನ್ನ ಉದ್ದೇಶದಲ್ಲಿ ತಿಳಿಸಿದಂತೆ, ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳ ಅಡಿಪಾಯದಲ್ಲಿದ್ದು, ಇದನ್ನು ಒಪ್ಪಿಕೊಂಡು ಬರುವ ಪ್ರತಿಯೊಬ್ಬರಿಗೂ ಸದಸ್ಯತನ ನೀಡಲಾಗುತ್ತದೆ. ಸಂಘದಲ್ಲಿ ಅಜೀವ ಸದಸ್ಯತನ, ಮಹಾಪೋಷಕ ಹಾಗೂ ಪೋಷಕ ಸದಸ್ಯತ್ವಗಳ ಮೂರು ಹಂತದ ಸದಸ್ಯತನ ಹೊಂದಿದ್ದು, ಈಗಾಗಲೇ 1300 ಜನ ಸದಸ್ಯರು ಆಗಿದ್ದು, ಮಹಾಅಧಿವೇಶನದ ಹೊತ್ತಿಗೆ 2000 ಸದಸ್ಯತ್ವಕ್ಕೆ ತಲುಪಬಹುದು. ಈಗಾಗಲೇ ಮಂಗಳೂರು ಚಿಲಿಂಬಿಯಲ್ಲಿ ಜಿಲ್ಲಾ ಮಾತೃ ಸಂಘದ ಕಛೇರಿಯನ್ನು ತೆರೆದಿದ್ದು, ಸದಸ್ಯರ ನೊಂದಣಿ, ಮಾಹಿತಿ ವಿವರ, ಸಮಾಜ ಬಾಂಧವರ ಸಮೀಕ್ಷೆ ಮುಂತಾದ ಕೆಲಕಾವ್ಯಗಳನ್ನು ಪ್ರಾರಂಭಿಸಿರುತ್ತೇವೆ. ಈದೀಗ ಸಂಘ ನೋಂದಾವಣೆ ಆಗಿ ಒಂದು ವರ್ಷ ಆಗುವ ಸಂದರ್ಭದಲ್ಲಿ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸಬೇಕೆಂಬ ಉದ್ದೇಶದಿಂದ ಜೂನ್ 1, ರಂದು ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸರ್ವಸದಸ್ಯರ ಮಹಾಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ.
ಅಧಿವೇಶನದಲ್ಲಿ ಜಿಲ್ಲಾ ಸಂಘವೂ ಮುಂದೆ ತೆಗೆದುಕೊಳ್ಳಬೇಕಾದ ಕೆಲಸಕಾರ್‍ಯ ಗಳು ಮತ್ತು ಯೋಜನೆಗಳ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಅಲ್ಲದೇ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಗುತ್ತದೆ. ಈ ಅಧಿವೇಶನವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ|ರೇಣುಕಾಪ್ರಸಾದ್ ಕೆ.ವಿ. ಯವರು ಉದ್ಘಾಟನೆ ಮಾಡಲಿದ್ದಾರೆ. ದ.ಕ.ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಒಕ್ಕಲಿಗರ ಯಾನೆ ಗೌಡ ಸಂಘದ ಅಧ್ಯಕ್ಷರುಗಳು ಗೌರವ ಉಪಸ್ಥಿತರಿರುತ್ತಾರೆ. ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡ ಕೆ ಯವರ ಅಧ್ಯಕ್ಷತೆಯಲ್ಲಿ ಈ ಅಧಿವೇಶನವನ್ನು ನಡೆಸಲಾಗುತ್ತದೆ. ಮಹಾಅಧಿವೇಶನದಲ್ಲಿ ಎಲ್ಲಾ ಪದಾಧಿಕಾರಿಗಳು, ಆಸಕ್ತ ಸಮಾಜ ಬಾಂಧವರುಗಳು ಭಾಗವಹಿಸಲಿದ್ದು, ಜಿಲ್ಲಾಮಟ್ಟದಲ್ಲಿ ಸಮಾಜದ ಸಂಘಟನೆ ಬೆಳೆಯಲು ಸಹಕಾರ ನೀಡಲಿರುವವರು, ಜಿಲ್ಲಾ ಸಂಘದ ಉಪಾಧ್ಯಕ್ಷರುಗಳಾಗಿ, ನಿತ್ಯಾನಂದ ಮುಂಡೋಡಿ ಸುಳ್ಯ, ರಾಮದಾಸ ಗೌಡ ಪುತ್ತೂರು, ಪೂವಾಜೆ ಕುಶಾಲಪ್ಪ ಗೌಡ ಬೆಳ್ತಂಗಡಿ, -ಲಿಂಗಪ್ಪ ಗೌಡ ಕೆ- ಬಂಟ್ವಾಳ, ತಿಮ್ಮಪ್ಪ ಗೌಡ ಕುಂಡಡ್ಕ ಕಡಬ ರವರುಗಳು ಇದ್ದು, ಸಂಘದ -ಪ್ರಧಾನಕಾರ್ಯದರ್ಶಿಯಾಗಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಹೆಚ್. ಪದ್ಮಗೌಡ ಬೆಳಾಲು, ಕಾರ್ಯದರ್ಶಿಗಳಾಗಿ ರಾಮಣ್ಣ ಗೌಡ ಕೊಂಡೆಬಾಯಿ ಮತ್ತು ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಸಂಘವನ್ನು ಮುನ್ನಡೆಸುತ್ತಿದ್ದಾರೆ ಎಂದು ಪುತ್ತೂರು ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.