
ಬೆಳ್ತಂಗಡಿ : ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ನಾವು ಠೇವಣಿಯಾಗಿ ಇಟ್ಟ 40.41 ಕೋಟಿ ಹಣ ವಂಚನೆ ಮಾಡಲಾಗಿದೆ ಎಂದು ಸೊಸೈಟಿಯ 13 ಮಂದಿ ಗ್ರಾಹಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಹಾಗೂ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಒಟ್ಟು 14 ಮಂದಿಯ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ. 23ರಂದು ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಪೇಟೆಯ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ತಮ್ಮ 13 ಮಂದಿಯ ಸುಮಾರು ರೂ.4,41,21, 503 ಹಣ ದುರುಪಯೋಗವಾಗಿದೆ ಅಲ್ಲದೆ ಇದೇ ಇನ್ನೂ ಹಲವಾರು ಮಂದಿ ಠೇವಣಿ ಇಟ್ಟಿದ್ದು ಸುಮಾರು ಅಂದಾಜು 40 ಕೋಟಿ ರೂ. ಹಣವನ್ನು ಮರು ಪಾವತಿಸದೆ ಗ್ರಾಹಕರಿಗೆ ವಂಚಿಸಲಾಗಿದೆ ಎಂದು ಗ್ರಾಹಕರಾದ ದಯಾನಂದ ನಾಯಕ್, ನಿಧೀಶ್.ಡಿ.ನಾಯಕ್, ಶಾರದ ಡಿ. ನಾಯಕ್, ಬಿ,ಮಾಲಿನಿ.ಟಿ.ರಾವ್, ತುಕರಾಮ್ ರಾವ್, ಅಕ್ಷಯಾ.ಟಿ.ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13ಮಂದಿ, ಬೆಳ್ತಂಗಡಿ ಠಾಣೆಗೆ ಮೇ 22ರಂದು ದೂರು ನೀಡಿದ್ದರು.
ದೂರು ಸ್ವೀಕರಿಸಿದ ಬೆಳ್ತಂಗಡಿ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಸಿಇಒ ಚಂದ್ರಕಾಂತ್, ಅಧ್ಯಕ್ಷರಾದ ಪ್ರಭಾಕರ ಸಿ.ಹೆಚ್,ಉಪಾಧ್ಯಕ್ಷ ಸದಾನಂದ.ಎಮ್ ಉಜಿರೆ, ನಿರ್ದೇಶಕರುಗಳಾದ ವಿಶ್ವನಾಥ.ಆರ್.ನಾಯಕ್, ಪ್ರಮೋದ್.ಆರ್.ನಾಯಕ್, ವಿಶ್ವನಾಥ, ಜಗನ್ನಾಥ.ಪಿ, ರತ್ನಾಕರ, ಸುಮ ದಿನೇಶ್ ಉಜಿರೆ ನಯನ ಶಿವಪ್ರಸಾದ್, ಮೋಹನ್ ದಾಸ್.ಕೆ, ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ.ಎಸ್ ಮತ್ತು ವಿನೋದ್ ಕುಮಾರ್.ಸಿ.ಹೆಚ್ ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ
ಕಳೆದ ಒಂದು ಕಳೆದ ವರ್ಷದ ಹಿಂದೆ ಸೊಸೈಟಿಯಲ್ಲಿ ಹಣ ದುರುಪಯೋಗವಾಗುವಾಗ ಡಿಸಿ, ಎಸ್ಪಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಡಿಸಿ ಕಚೇರಿಯಿಂದ ಎಸ್ಪಿಗೆ ದೂರನ್ನು ರವಾನೆ ಮಾಡಲಾಗಿತ್ತು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದರು ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಮಂದಿ ಗ್ರಾಹಕರು ಮೇ.22 ರಂದು ಸೊಸೈಟಿಯ 14 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಮೇ.23 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.