ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಪ್ರಾದೇಶಿಕ ರಕ್ತ ಪೂರಣ ಕೇಂದ್ರ,ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಸಹಯೋಗದೊಂದಿಗೆ ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಮೇ. 24 ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಅಭಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಹರಿ ಭಟ್ ಕೆ ನೇರವೇರಿಸಿ ಮಾತನಾಡಿ ತುರ್ತು ಅವಶ್ಯಕವಿರುವ ವಸ್ತು ರಕ್ತ,ಜನರು ತಾವಾಗಿಯೇ ರಕ್ತದಾನ ಮಾಡುವುದು ಕಡಿಮೆ, ನಾವು ಮುಂದೇ ಬಂದು ರಕ್ತದಾನ ಮಾಡುವ ಪರಿಪಾಠ ಬೆಳೆಸಬೇಕು. ರಕ್ತದಾನ ಅತ್ಯಂತ ಶ್ರೇಷ್ಠವಾದುದು ಎಂದರು.

ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾ ಪ್ರಶಾಂತ್ ವಹಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದೇವದಾಸ್ ಶೆಟ್ಟಿ, ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯ್ ಕುಮಾರ್ ಜೈನ್,ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ,ಜಿಲ್ಲಾ ಆಸ್ಪತ್ರೆಯ ರಕ್ತ ಪೂರಣ ಕೇಂದ್ರದ ಸಂಯೋಜಕ ಆಂಟೋನಿ, ಮಹಿಳಾ ಜೆಸಿ ಸಂಯೋಜಕಿ ಚಿತ್ರಪ್ರಭಾ, ರಕ್ತದಾನ ಶಿಬಿರದ ಸಂಯೋಜಕ ಸುದೀಪ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷರಾದ ತುಕರಾಮ್ ಬಿ, ವಸಂತ ಶೆಟ್ಟಿ, ಸಂತೋಷ್ ಪಿ ಕೋಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾಯಿಲ ಹಾಗೂ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷ ನಾರಾಯಣ ಶೆಟ್ಟಿ ವೇದಿಕೆಗೆ ಆಹ್ವಾನಿಸಿದರು. ದೀಪ್ತಿ ಜೇಸಿವಾಣಿ ಉದ್ಘೋಷಿಸಿದರು.