ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು – ಜೋಡುಕಟ್ಟೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಜನರು, ಸವಾರರು ಓಡಾಟ ಶೋಚನೀಯ ವಾಗಿದೆ. ರಸ್ತೆ ಅಭಿವೃದ್ಧಿ ಕುರಿತು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರು ಯಾವುದೇ ಕಾಯಕಲ್ಪ ದೊರೆಯದೆ ನಾಗರೀಕರ ಬದುಕು ದುಸ್ತರವಾಗಿದೆ.

ಸುಮಾರು 700 ಮೀಟರ್ ಉದ್ದವಿರುವ ಜಿಲ್ಲಾ ಪಂಚಾಯತ್ ರಸ್ತೆ ಇದಾಗಿದ್ದು ಡಾಮರು ಜಲ್ಲಿಕಲ್ಲುಗಳು ಎದ್ದು ಹೋಗಿ ಮಣ್ಣಿನ ಮಾರ್ಗ ನಿರ್ಮಾಣವಾಗಿದ್ದು ಎಡೆಬಿಡದೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದ್ದು ಓಡಾಡಲು ಅಸಾಧ್ಯವಾದ ರೀತಿಯಲ್ಲಿದೆ.

ಶೋಚನೀಯ ಸ್ಥಿತಿಯಲ್ಲಿ ಇರುವ ಈ ರಸ್ತೆ ಅಭಿವೃದ್ಧಿ ಕುರಿತು ಸತತ ಏಳು ವರ್ಷಗಳಿಂದ ಹಲವಾರು ಬಾರಿ ಮನವಿ ಸಲ್ಲಿಸಿದರು ಜನಪ್ರತಿನಿಧಿಗಳ ಭರವಸೆ ನೀಡುತ್ತಾರೆ ಹೊರತು ಕಾಯಕಲ್ಪ ಹಾದಿ ಇನ್ನೂ ಕಂಡಿಲ್ಲ.

ತೆಕ್ಕಾರು ಪ್ಯಾಕ್ಸ್, ನ್ಯಾಯ ಬೆಲೆ, ಶಾಲೆಗೆ ಹೋಗುವ ಪ್ರಮುಖ ರಸ್ತೆಯಾಗಿದೆ. ಬಸ್. ಸಂಚಾರವೂ ಇದ್ದು ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ನಡೆದುಕೊಂಡು ಹೋಗಲು ಅಸಾಧ್ಯಗೊಂಡಿರುವ ಸ್ಥಿತಿಯಲ್ಲಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸೂಕ್ತ ರೀತಿಯಲ್ಲಿ ರಸ್ತೆಗೆ ಕಾಯಕಲ್ಪ ನೀಡಬೇಕೆಂದು ಸಾರ್ವಜನಿಕರು ಆಗ್ರಹ.
ವರದಿ :ಮನೀಷ್ ವಿ.ಅಂಚನ್ ಕುಕ್ಕಿನಡ್ಡ