September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾಜಾರು – ಜೋಡುಕಟ್ಟೆ ರಸ್ತೆ ಕೆಸರುಮಯ ಓಡಾಟ ಶೋಚನೀಯ ! : ಹಲವು ವರ್ಷಗಳಿಂದ ದೊರೆಯದ ಕಾಯಕಲ್ಪ

ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು – ಜೋಡುಕಟ್ಟೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಜನರು, ಸವಾರರು ಓಡಾಟ ಶೋಚನೀಯ ವಾಗಿದೆ. ರಸ್ತೆ ಅಭಿವೃದ್ಧಿ ಕುರಿತು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರು ಯಾವುದೇ ಕಾಯಕಲ್ಪ ದೊರೆಯದೆ ನಾಗರೀಕರ ಬದುಕು ದುಸ್ತರವಾಗಿದೆ.

ಸುಮಾರು 700 ಮೀಟರ್ ಉದ್ದವಿರುವ ಜಿಲ್ಲಾ ಪಂಚಾಯತ್ ರಸ್ತೆ ಇದಾಗಿದ್ದು ಡಾಮರು ಜಲ್ಲಿಕಲ್ಲುಗಳು ಎದ್ದು ಹೋಗಿ ಮಣ್ಣಿನ ಮಾರ್ಗ ನಿರ್ಮಾಣವಾಗಿದ್ದು ಎಡೆಬಿಡದೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದ್ದು ಓಡಾಡಲು ಅಸಾಧ್ಯವಾದ ರೀತಿಯಲ್ಲಿದೆ.

ಶೋಚನೀಯ ಸ್ಥಿತಿಯಲ್ಲಿ ಇರುವ ಈ ರಸ್ತೆ ಅಭಿವೃದ್ಧಿ ಕುರಿತು ಸತತ ಏಳು ವರ್ಷಗಳಿಂದ ಹಲವಾರು ಬಾರಿ ಮನವಿ ಸಲ್ಲಿಸಿದರು ಜನಪ್ರತಿನಿಧಿಗಳ ಭರವಸೆ ನೀಡುತ್ತಾರೆ ಹೊರತು ಕಾಯಕಲ್ಪ ಹಾದಿ ಇನ್ನೂ ಕಂಡಿಲ್ಲ‌.

ತೆಕ್ಕಾರು ಪ್ಯಾಕ್ಸ್, ನ್ಯಾಯ ಬೆಲೆ, ಶಾಲೆಗೆ ಹೋಗುವ ಪ್ರಮುಖ ರಸ್ತೆಯಾಗಿದೆ. ಬಸ್. ಸಂಚಾರವೂ ಇದ್ದು ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ನಡೆದುಕೊಂಡು ಹೋಗಲು ಅಸಾಧ್ಯಗೊಂಡಿರುವ ಸ್ಥಿತಿಯಲ್ಲಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸೂಕ್ತ ರೀತಿಯಲ್ಲಿ ರಸ್ತೆಗೆ ಕಾಯಕಲ್ಪ ನೀಡಬೇಕೆಂದು ಸಾರ್ವಜನಿಕರು ಆಗ್ರಹ.
ವರದಿ :ಮನೀಷ್ ವಿ.ಅಂಚನ್ ಕುಕ್ಕಿನಡ್ಡ

Related posts

ಭಾರೀ ಮಳೆಗೆ ಬಂದಾರು ಪೇರಲ್ತಪಲಿಕೆಯಲ್ಲಿ ಗುಡ್ಡ ಜರಿದು ಹಾನಿ

Suddi Udaya

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ : ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ: ಸ್ಕೂಟರ್ ನಲ್ಲಿದ್ದ ಮಹಿಳೆಗೆ ಗಂಭೀರ ಗಾಯ

Suddi Udaya

ಮಡಂತ್ಯಾರು ಸಿ ಎ ಬ್ಯಾಂಕ್ ಅಧ್ಯಕ್ಷ ಜೊಯೆಲ್ ಮೆಂಡೊನ್ಸಾ ರವರನ್ನು ಅಭಿನಂದಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ, ಉಜಿರೆ ಉದ್ಯಮಿ ಕೆ.ಮೋಹನ್ ಕುಮಾರ್ ರವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

Suddi Udaya

ಶ್ರೀ ಧ. ಮಂ. ಪ ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ

Suddi Udaya
error: Content is protected !!