ಬಂದಾರು : ಮೇ 23 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಬಂದಾರು ಗ್ರಾಮದ ಶಿವನಗರ – ಪೆರ್ಲ ಬೈಪಾಡಿ ಮುಖ್ಯ ರಸ್ತೆಯ ಮುರ್ತಾಜೆ ಎಂಬಲ್ಲಿ ಸೇತುವೆ ಬಳಿ ರಸ್ತೆಗೆ ಮರ ಉರುಳಿ ಬಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡರವರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಗೆ ಮಾಹಿತಿ ತಿಳಿಸಿ ಸಂಚಾರಕ್ಕೆ ಯೋಗ್ಯ ಆಗುವಲ್ಲಿ ಸಹಕರಿಸಿದರು.