25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ನಿಂದ ಸಾಮರ್ಥ್ಯ ವರ್ಧನಾ ತರಬೇತಿ

ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯ ಒಕ್ಕೂಟಗಳ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿಯನ್ನು ಸಾನ್ ಟವರ್ ಬೆಳ್ತಂಗಡಿ ಇಲ್ಲಿ ಮೇ 23 ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹಕಿರಣ್ ಜಿಲ್ಲಾಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಎಲಿಯಮ್ಮ ತೋಮಸ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಧನೇಶ್ವರಿ ಪ್ರಾಧ್ಯಾಪಕರು, ಸಮಾಜ ಕಾರ್ಯ ವಿಭಾಗ, ಎಸ್.ಡಿ.ಎಮ್. ಕಾಲೇಜು ಉಜಿರೆ ಇವರು ಒಕ್ಕೂಟಗಳ ಸದಸ್ಯರು ನಾಯಕತ್ವ ವಹಿಸಿ ಸಂಘಟನೆಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಬಗ್ಗೆ ತರಬೇತಿ ನೀಡಿದರು.

ಡಿ.ಕೆ.ಆರ್.ಢಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹ ಜ್ಯೋತಿ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಜಿನ್ಸಿ ರಾಜೇಶ್ ಸ್ವಾಗತಿಸಿದರು. ಕಿರಣ್ ತಾಲೂಕು ಒಕ್ಕೂಟದ ಜೊತೆ ಕಾರ್ಯದರ್ಶಿ ಶ್ರೀಮತಿ ನಿಶಾ ವಂದಿಸಿದರು. ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಮಂಜುಳಾ ಜೋನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸಂಘಗಳಿಂದ ಆಯ್ಕೆ ಮಾಡಿರುವ ವಿವಿಧ ಕ್ರಿಯಾಶೀಲ ನಾಯಕರುಗಳು ಪಾಲ್ಗೊಂಡರು.

Related posts

ಸಬರಬೈಲು ಶಾಲಾ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ಮಾರ್ಗದಲ್ಲಿ ಹರಿಯುತ್ತಿರುವ ನೀರು: ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಅಗ್ರಹ

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya

ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ಅಟ್ಟಳಿಗೆ ಸ್ತಂಭನ್ಯಾಸ ಕಾರ್ಯಕ್ರಮ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವಕ್ಕೆ ಮಾಜಿ ಶಾಸಕರಾದ ಪ್ರಭಾಕರ ಬಂಗೇರ ಭೇಟಿ

Suddi Udaya

ಭಾರಿ ಗಾಳಿ ಮಳೆಗೆ ಹಾನಿಗೀಡಾದ ಮನೆ, ಶಾಲೆ, ಮದರಸಗಳಿಗೆ ನಾವೂರು ಗ್ರಾ.ಪಂ ನಿಂದ ಭೇಟಿ ಪರಿಶೀಲನೆ

Suddi Udaya
error: Content is protected !!