ನಾವೂರು :ಇಲ್ಲಿಯ ಜನತಾ ಕಾಲೋನಿಯ ಹಮೀದ್ ಎಂಬವರ ಮನೆಯ ಮುಂಭಾಗದ ಗುಡ್ಡ ಜರಿದು ಅಪಾರ ತೊಂದರೆಯಾಗಿದೆ. ಮೇ. 24ರ ರಾತ್ರಿ ಸುರಿದ ಬಾರಿ ಮಳೆಗೆ ಈ ಗುಡ್ಡ ಸಂಪೂರ್ಣ ಕುಸಿದಿದೆ. ಇವರ ಮನೆಗೆ ಏನೂ ಹಾನಿಯಾಗಿಲ್ಲವಾದರು, ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತಕ್ಕೊಳಗಾಗಿದೆ. ತಗ್ಗು ಪ್ರದೇಶದಲ್ಲಿ ಈ ಮನೆ ಇದ್ದ ಕಾರಣ
ಪ್ರತಿನಿತ್ಯ ಓಡಾಡಲು, ಮೆಟ್ಟಿಲಿನ ವ್ಯವಸ್ಥೆ ಮಾಡಿದ್ದರು. ಆದರೆ ಆರ್ಥಿಕವಾಗಿ ತುಂಬಾ ಬಡತನದಲ್ಲಿರುವ ಹಮೀದ್ ರವರ ಕುಟುಂಬ ಇದೀಗ ಕಂಗೆಟ್ಟಿದೆ.
ದುಡಿದು ತಿನ್ನುವ ಈ ಸಂಸಾರಕ್ಕೆ

ಹಾಗೂ ಜರಿದ ಗುಡ್ಡೆಗೆ ಇನ್ನೂ ಜರಿಯಾದಂತೆ ಶಾಶ್ವತ ಪರಿಹಾರದ ಅಗತ್ಯವಿದೆ. ಸಂಬಂಧಿಸಿದವರು ಸಹಕರಿಸಿ ಇದಕ್ಕೊಂದು ಶಾಶ್ವತ ವ್ಯವಸ್ಥೆ ಮಾಡಬೇಕಾಗಿದೆ.