September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ : ಬೆಳ್ತಂಗಡಿಯ ಅವಳಿ ಮಕ್ಕಳು ವಿಜೇತರು

ಬೆಳ್ತಂಗಡಿ: ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ 2025 ಅನ್ನು ಆ. 3ರಂದು ಬೆಂಗಳೂರಿನ ಯಲಚೆನಹಳ್ಳಿ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅಂತರ್ ಶಾಲಾ ಸ್ಪರ್ಧೆಯು ಆಯೋಜಿಸಲಾಯಿತು.

ಈ ಸ್ಪರ್ಧೆಯಲ್ಲಿ, ಮಿತ್ತಬಾಗಿಲು ಗ್ರಾಮದ, ಆಚಾರಿಬೆಟ್ಟು ಮನೆಯ “ಶ್ರೀಯುವ ಟಿಲ್ಲರ್ ಡೀಕಯ್ಯ ಗೌಡ”ರ ಮೊಮ್ಮಕ್ಕಳಾದ, ಬೆಂಗಳೂರು ನಗರದಲ್ಲಿ ವಾಸವಾಗಿರುವ ವಿನಯಚಂದ್ರ ರವರ ಅವಳಿ ಮಕ್ಕಳಾದ “ಎ. ವಿಭಾಷ್ ವಿನಯಚಂದ್ರ” ಮತ್ತು “ಎ. ವಿಭಾ ವಿನಯಚಂದ್ರ” ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದು, ತಲಾ ಎರಡು ಪದಕ ಮತ್ತು ಟ್ರೋಪಿಗಳನ್ನು ಗೆಲ್ಲುವ ಮೂಲಕ ಟೂರ್ನಮೆಂಟ್ ಟ್ರೋಫಿಯನ್ನು ಪಡೆದಿದ್ದಾರೆ. ಇವರಿಗೆ ತರಬೇತಿದಾರರದ ರಾಜೇಂದ್ರ ಬಾಬು ಮತ್ತು ಗೀತಾ ಮಾರ್ಗದರ್ಶನ ನೀಡಿದ್ದಾರೆ.

ವಿಭಾಷ್ ಮತ್ತು ವಿಭಾ ಇಬ್ಬರೂ ಜೆ.ಪಿ.ನಗರದ ಸನ್ ಜುಪಿಟರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇವರ ಕರಾಟೆ ಸಾಧನೆಯು ಶಾಲೆಯು ಹಾಗೂ ತರಬೇತಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರವಾಗಿದೆ.

ಇವರ ತಂದೆ ವಿನಯಚಂದ್ರ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಅವರು ಮಕ್ಕಳ ಸಾಧನೆಗೆ ಹೆಮ್ಮೆಯ ಅಭಿವ್ಯಕ್ತಿ ನೀಡಿದರು.

ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆ ಒಕಿನಾವನ್ ಶೈಲಿಯ ಕರಾಟೆಯ ಕೌಶಲ್ಯ ಮತ್ತು ಕ್ರೀಡಾಸ್ಪರ್ಧೆಯ ಉತ್ಸವವಾಗಿತ್ತು. ಸಹೋದರ-ಸಹೋದರಿಯರ ಪ್ರದರ್ಶನವು ಈ ಕೂಟದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು.

Related posts

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಅಳದಂಗಡಿ ಸೊಸೈಟಿಗೆ ಸಾಧನ ಪ್ರಶಸ್ತಿ

Suddi Udaya

ಫೆ.6: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

Suddi Udaya

ಮೇ.1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Suddi Udaya

ಆಟೋ ರಿಕ್ಷಾ ಮಗುಚಿಬಿದ್ದು ಮೃತಪಟ್ಟ ಬಾಲಕನ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಭೇಟಿ

Suddi Udaya

ಬಿಜೆಪಿ‌ ಕಣಿಯೂರು ಮಹಾಶಕ್ತಿ ಕೇಂದ್ರ ಹಾಗೂ ಬಂದಾರು ಗ್ರಾ.ಪಂ. ವ್ಯಾಪ್ತಿಯ ಅಭಿಮಾನಿಗಳಿಂದ ಶಾಸಕ ಹರೀಶ್ ಪೂoಜರವರ ಹುಟ್ಟುಹಬ್ಬ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಶ್ರಾವಣ ತರಬೇತಿ ಸಪ್ತಾಹದ ಉದ್ಘಾಟನೆ

Suddi Udaya
error: Content is protected !!