ಬೆಳ್ತಂಗಡಿ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂಡಳಿ ವತಿಯಿಂದ ತಂಡದ ಭಜಕರಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಮೇ 23ರಂದು ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು.

ಭಜನಾ ಮಂಡಳಿಯ ಅಧ್ಯಕ್ಷ ಜಾರಪ್ಪ ಸಪಲ್ಯ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಮತ್ತು ಪ್ರಧಾನ ಅರ್ಚಕ ಶ್ರೀಧರ ಲಿಂಗಾಯತ ರವರು ಭಜನಾ ತಂಡದ ಒಟ್ಟು 37 ಮಕ್ಕಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಸಂಪೂರ್ಣ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರುಗಳು ಹಾಗೂ ಪೋಷಕರು ಉಪಸ್ಥಿತರಿದ್ದರು