27.9 C
ಪುತ್ತೂರು, ಬೆಳ್ತಂಗಡಿ
March 6, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು ವಿತರಣೆ – ಸಬ್ಸಿಡಿ ಬೆಲೆ ಪ್ರತಿ ಕಿಲೋ ರೂ. 280 ಆಗಿದ್ದು,ರೈತರ ಇದರ ಪ್ರಯೋಜನ ಪಡೆಯಿರಿ: ಅಧ್ಯಕ್ಷ ರಾಕೇಶ್ ಹೆಗ್ಡೆ – ರೈತರಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳ ಖರೀದಿಗೆ ರೂ.20 ಸಾವಿರದಂತೆ ಸಾಲ ಯೋಜನೆ

ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಮೈಲುತುತ್ತು ವಿತರಣೆ ಮಾಡುತ್ತಿದ್ದು ಅಡಿಕೆ ಬೆಳೆಗಾರರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ತಿಳಿಸಿರುತ್ತಾರೆ.

ಸಬ್ಸಿಡಿ ಬೆಲೆ ಪ್ರತಿ ಕಿಲೋ ರೂ. 280 ಆಗಿದ್ದು ಬೆಳೆಗಾರರಿಗೆ ಈ ಬೆಲೆಯಲ್ಲಿ ಮೈಲುತುತ್ತು ನೀಡುತ್ತಿದ್ದೇವೆ. ಕಳೆದ ಬಾರಿ ಕೊಳೆರೋಗದ ಬಾಧೆಯಿಂದ ಅಡಿಕೆ ಬೆಳಗಾರರು ತುಂಬಾ ಕಷ್ಟ ನಷ್ಟ ಗಳನ್ನು ಅನುಭವಿಸಿದ್ದು ಈ ಸಂದರ್ಭದಲ್ಲಿ ಸಂಘದಿಂದ ಕಡಿಮೆ ಬೆಲೆಯಲ್ಲಿ ಮೈಲುತುತ್ತು ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಜೊತೆಗೆ ರೈತರಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳ ಖರೀದಿಗೆ ವಿಶೇಷವಾಗಿ ಪ್ರತಿ ಎಕ್ರೆಗೆ ರೂ. 20 ಸಾವಿರದಂತೆ ಓವರ್ ಡ್ರಾಫ್ಟ್, (ಓಡಿ) ಸಾಲ ನೀಡಿ ರೈತರಿಗೆ ಸದಾ ಸ್ಪಂದನೆ ನೀಡಲಾಗುವುದು. ಈ ಯೋಜನೆ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ಈಗಾಗಲೇ ಮೈಲು ತುತ್ತು ವಿತರಣೆಗೆ ಚಾಲನೆ ನೀಡಲಾಗಿದ್ದು ಶೇಖರ ಆಚಾರ್ಯ ಪಿಲ್ಯ ಹಾಗೂ ಧರ್ಣಪ್ಪ ಪೂಜಾರಿ ಬಡಗಕಾರಂದೂರು ಇವರಿಗೆ ಪ್ರಥಮವಾಗಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜನಾರ್ಧನ ಪೂಜಾರಿ,ಸಿಇಓ ಮೀರಾ, ನಿರ್ದೇಶಕರಾದ ದಿನೇಶ್ ಪಿ‌ಕೆ,ದೇವಿಪ್ರಸಾದ್ ಶೆಟ್ಟಿ,ದೇಜಪ್ಪ ಪೂಜಾರಿ ಹಾಗೂ ಕೃಷಿಕರು ಉಪಸ್ಥಿತರಿದ್ದರು.

Related posts

ಉಜಿರೆಯಲ್ಲಿ ಸುಗಂಧಿ’ ಸ್ ಗಲ್ಲಿ ಕಿಚನ್ ಹೋಟೆಲ್ ಉದ್ಘಾಟನೆ

Suddi Udaya

ಪುಂಜಾಲಕಟ್ಟೆಯಲ್ಲಿ ಲಾರಿ ಪಲ್ಟಿ: ಓರ್ವ ಸಾವು

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ -ಕಾಲೇಜು ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ

Suddi Udaya

ಜ.4: ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ಆಶ್ರಯದಲ್ಲಿ 15ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ

Suddi Udaya

ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್.ಡಿ.ಎಂ. ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರು

Suddi Udaya
error: Content is protected !!