25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ: EduNest ಅಕಾಡೆಮಿ ಕೋಚಿಂಗ್ ಕೇಂದ್ರ ಉದ್ಘಾಟನೆ

ಕೊಕ್ಕಡ: ಮಕ್ಕಳ ಭವಿಷ್ಯ ನಿರ್ಮಾಣದ ಮಹತ್ವದ ಗುರಿಯನ್ನು ಮನಸಿನಲ್ಲಿಟ್ಟುಕೊಂಡು ಕೊಕ್ಕಡದ ಸಮ್ಯಕ್ ಬಿಲ್ಡಿಂಗ್ ನಲ್ಲಿ ಆರಂಭಿಸಿರುವ EduNest ಅಕಾಡೆಮಿ ಕೋಚಿಂಗ್ ಕೇಂದ್ರವನ್ನು ಪೆರ್ಲಾ ಮತ್ತು ಕೊಕ್ಕಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೋರವರು ಮೇ 25ರಂದು ದೀಪ ಬೆಳಗಿಸಿ ಉದ್ಘಾಟಿಸಿ, ತರಬೇತಿ ಕೇಂದ್ರಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಸಂತೋಷ್ ಜೈನ್ ಮತ್ತು ಶ್ರೀಮತಿ ರೇಷ್ಮಾ ಉಪಸ್ಥಿತರಿದ್ದರು.

ಸಂಸ್ಥೆಯು 1 ನೇ ತರಗತಿಯಿಂದ 8ನೇ ತರಗತಿಯವರೆಗೆ ಟ್ಯೂಷನ್ ತರಗತಿ ಮತ್ತು 9, 10ನೇ ತರಗತಿ ಮತ್ತು 1st ಪಿಯುಸಿ( Science ಮತ್ತು Commerce) ತರಗತಿಯವರಿಗೆ ಬೋಧನೆಯನ್ನು ಒದಗಿಸಲಾಗುತ್ತದೆ. ಇದರೊಟ್ಟಿಗೆ ಗಣಿತವನ್ನು ಸುಲಭ ರೀತಿಯಲ್ಲಿ ಕಲಿಯುವಂತಹ ಅಬಕಾಸ್ ತರಗತಿಯನ್ನು ನಡೆಸಲಾಗುತ್ತದೆ. ಅನುಭವಿ ಅಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ವ್ಯೆಯಕ್ತಿಕ ಗಮನ, ನಡವಳಿಕೆಯ ಮಾರ್ಪಡು, ಓದುವಿಕೆ ಮತ್ತು ಬರವಣಿಗೆ ಕೌಶಲ್ಯಗಳು, ಪೋಷಕರಿಗೆ ನಿಯಮಿತವಾಗಿ ವರದಿ ಮಾಡುವುದು, ನಿಯಮಿತ ಪರೀಕ್ಷಾ ಸರಣಿಗಳು. ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಲು ಸಹಾಯ ಮಾಡುವುದು. ಕಲಿಕೆಯ ಸುಲಭ ವಿಧಾನ, ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತವೇದಿಕೆ ಒದಗಿಸುವುದು. ಇದರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಳು ಬೇಕಾಗುವ ತರಬೇತಿ, ಕ್ಯಾರಿಯರ್ ಗೈಡೆನ್ಸ್ ಮತ್ತು ವೆಕ್ತಿತ್ವ ವಿಕಾಸನಕ್ಕೆ ಬೇಕಾಗುವ ತರಬೇತಿಯನ್ನು ನೀಡುವುದಾಗಿ ಸಂಸ್ಥೆಯ ಸದಸ್ಯರು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀಮತಿ ಅಭಿಜ್ಞಾ, ಅಧ್ಯಾಪಕರಾದ ಶ್ರೀಮತಿ ಶುಭ್ರ ಜೈನ್, ಶ್ರೀಮತಿ ದೀಪಿಕಾ ಉಪಸ್ಥಿತರಿದ್ದರು. ಅದೇ ರೀತಿ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಡಾ. ಶೋಭಾ ನಿರೂಪಿಸಿದ ಕಾರ್ಯಕ್ರಮವನ್ನು ಕುಮಾರಿ ಪ್ರೀತಿಕಾ ಪ್ರಾರ್ಥನೆ ಮಾಡಿ, ಶ್ರೀಮತಿ ಮನೋರಮ ವಂದಿಸಿದರು.

Related posts

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya

ಸೆ.21: ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಮಹಾ ಸಮ್ಮಿಲನ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಭಾರಿ ರಿಯಾಯಿತಿ

Suddi Udaya

ಶ್ರೀ ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವ, ದೇವರ ವಿಗ್ರಹದ ಮೆರವಣಿಗೆ : ಹೊರಕಾಣಿಕೆ ಸಮರ್ಪಣೆ

Suddi Udaya

ಮಚ್ಚಿನ: ಕುತ್ತಿನ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಆಯುಧ ಪೂಜೆ

Suddi Udaya
error: Content is protected !!