ಪಡಂಗಡಿ: ಹಚ್ಚಾಡಿಯಿಂದ ಬಳಂಜಕ್ಕೆ ಸಂಪರ್ಕಿಸುವ ಕೊಂಗುಲ ಕಿರು ಸೇತುವೆಯಲ್ಲಿ ಭಾರಿ ಮಳೆಗೆ ನದಿಯಿಂದ ಹರಿದು ಬಂದ ತ್ಯಾಜ್ಯಗಳ ರಾಶಿ ಬಂದು ಶೇಖರಣೆಯಾಗಿದೆ.

ಪೇಟೆಗೆ ಹೋಗಬೇಕಾದರೆ ಕೆಲವರು ಈ ಕಿರುಸೇತುವೆಯನ್ನು ಅವಲಂಬಿಸಿದ್ದು, ತ್ಯಾಜ್ಯ ಶೇಖರಣೆಯಿಂದ ಹೋಗಲಾಗದ ಸ್ಥಿತಿಯಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ.