September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಿಯೋ ಕ್ಲಬ್ ನ ಪದಗ್ರಹಣ ಸಮಾರಂಭ

ಬೆಳ್ತಂಗಡಿ : ಲಿಯೋ ಕ್ಲಬ್ ಬೆಳ್ತಂಗಡಿ ಇದರ ಪದಗ್ರಹಣ ಸಮಾರಂಭವು ಬಲಿಪ ರೆಸಾರ್ಟ್ ನಡದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಲಿಯೋ ಲಯನ್ ಡಾ. ರಂಜಿತಾ ಶೆಟ್ಟಿ ಯವರು ನೂತನ ತಂಡದ ಪದಗ್ರಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಶ್ರೀನಿಧಿ ಶೆಟ್ಟಿಯವರು ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಂತ್ಯಾಧ್ಯಕ್ಷ ಲಯನ್ ಜಗದೀಶ್ಚಂದ್ರ ಭಾಗವಹಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮುರಳಿ ಬಲಿಪ, ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಲಯನ್ ಸುಭಾಷಿನಿ, ಲಿಯೋ ಕ್ಲಬ್ ನ ಮಾರ್ಗದರ್ಶಕ ಲಯನ್ ಕೃಷ್ಣ ಕೆ ಆಚಾರ್ಯ, ಲಯನ್ ಡಾ.ದೇವಿ ಪ್ರಸಾದ್ ಬೊಲ್ಮಾ, ಕಳೆದ ಸಾಲಿನ ಕೋಶಾಧಿಕಾರಿ ಲಿಯೊ ಅಭಿಜ್ಞಾ ಬೊಲ್ಮಾ, ಪ್ರಸ್ತುತ ಸಾಲಿನ ಲಿಯೋ ಕ್ಲಬ್ ನ ಅಧ್ಯಕ್ಷೆ ಲಿಯೋ ಭಾಷಿಣಿ, ಕೋಶಾಧಿಕಾರಿ ಲಿಯೋ ಗ್ಲೆನ್ ಮೋನಿಸ್ ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷ ಲಿಯೊ ಅಪ್ಸರ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಲಿಯೋ ದೀಕ್ಷಿತ್ ಧನ್ಯವಾದ ನೀಡಿದರು.

Related posts

ಶಿರ್ಲಾಲಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟೀಚರ್ಸ್ ಡೇ ಮತ್ತು ಓಣಂ ಹಬ್ಬದ ಆಚರಣೆ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

Suddi Udaya

ಹೊಸ ಬೆಳಕು ಒಕ್ಕೂಟ ಹಾಗೂ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿ

Suddi Udaya

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಪಶು ವೈದ್ಯ ಇಲಾಖೆ ಮೈಸೂರಿನ ಸೂಪರಿಟೆಂಡೆಂಟ್ ಜೆಸಿಂತಾ ಮೋರಸ್, ಹಾಗೂ ಕೃಷಿ ಇಲಾಖೆಯ ರೊನಾಲ್ಡ್ ಭೇಟಿ

Suddi Udaya

ಗೃಹ ಜ್ಯೋತಿ ಯೋಜನೆ: ಮನೆ ಮನೆಗೆ ತೆರಳಿ ಅರ್ಜಿ ಸ್ವೀಕಾರ – ಗೊಂದಲ ಬೇಡ, ಅರ್ಹರನ್ನು ಕೈಬಿಡುವುದಿಲ್ಲ: ಪದ್ಮನಾಭ ಸಾಲಿಯನ್

Suddi Udaya
error: Content is protected !!