ಕೊಕ್ಕಡ: ಬಯಲು ಆಲಯ ಪ್ರಖ್ಯಾತಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೂಡಿಗೆರೆ ಶಾಸಕಿ ಶ್ರೀಮತಿ ನಯನ ಮೋಟಮ್ಮ ಭೇಟಿ ನೀಡಿ ಶ್ರೀ ಮಹಾಗಣಪತಿ ದೇವರಿಗೆ ರಂಗ ಪೂಜೆ ಸಲ್ಲಿಸಿದರು ಸಲ್ಲಿಸಿದರು.

ಶಾಸಕರನ್ನು ವ್ಯವಸ್ಥಾಪನ ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಮ್ ನಾಗೇಶ್ ಕುಮಾರ್ ಗೌಡ, ಸಮಿತಿಯ ಸದಸ್ಯರಾದ ಪ್ರಶಾಂತ್ ಮಚ್ಚಿನ, ವಿಶ್ವನಾಥ್ ಪೂಜಾರಿ ಕೊಲ್ಲಾಜೆ, ಪ್ರಮೋದ್ ಕುಮಾರ್ ರೈ, ಹರಿಶ್ಚಂದ್ರ ಕೊಕ್ಕಡ, ಗಣೇಶ್ ಕಾಶಿ ಕೊಕ್ಕಡ, ಉಪಸ್ಥಿತರಿದ್ದರು.