ನಡ: ಗ್ರಾಮ ಪಂಚಾಯತ್ ನಡ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ 27ರಂದು ನಡ ಗ್ರಾಮ ಪಂಚಾಯತ್ ಅಂಬೇಡ್ಕರ್ ಸಮಾಜ ಮಂದಿರದಲ್ಲಿ ನಡೆಯಿತು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಸದಸ್ಯರಾದ ಶ್ರೀಮತಿ ಶಶಿಕಲಾ ಜೈನ್, ಪಂ.ಅ.ಅಧಿಕಾರಿಗಳಾದ ಶ್ರೀನಿವಾಸ ಡಿ.ಪಿ, ಕಾರ್ಯದರ್ಶಿಗಳಾದ ಕಿರಣ್ ಎಂ ಉಪಸ್ಥಿತರಿದ್ದರು.
ಮೇ 20 ರಿಂದ 27 ರವರೆಗೆ ನಡೆದ ಈ ಶಿಬಿರದ ಅವಧಿಯಲ್ಲಿ ಸುಗಮಗಾರರಾಗಿ ಶ್ರೀಮತಿ ಉಮಾವತಿ ಉಪನ್ಯಾಸಕರು, ಕು.ಸಲ್ಮಾಝ್ ಬಾನು ಶಿಕ್ಷಕಿ ಪ್ರೌಢ ಶಾಲೆ ಕಾಜೂರು, ಶ್ರೀ ಜನಾರ್ಧನ ಸುರ್ಯ ದುರ್ಗಾಂಬ ಪ್ರೌಢಶಾಲೆ ಆಲಂಕಾರು ಕಡಬ, ಕು. ಕಂಬ್ರುನ್ನೀಸಾ ಬಾನು ಶಿಕ್ಷಕರು ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆ , ಶ್ರೀಮತಿ ಲೀನಾ ಸಮುದಾಯ ಆರೋಗ್ಯ ಅಧಿಕಾರಿಗಳು ನಡ, ಶ್ರೀಮತಿ ಸುಜಾತ ಶಿಕ್ಷಕರು ಸ.ಕಿ.ಪ್ರಾ.ಉರ್ದು ಶಾಲೆ ನಡ, ಶ್ರೀಮತಿ ಮೋಹಿನಿ ಮೇಲ್ವಿಚಾರಕಿ ವಿಮುಕ್ತಿ ಸ್ವ ಸಹಾಯ ಸಂಘ ಇವರುಗಳು ಭಾಗವಹಿಸಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು, ಕ್ರಿಯಾಶೀಲ ಆಟಗಳನ್ನು ಆಯೋಜಿಸಿ ರಂಜಿಸಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಹಬೀಬ್ ಸಾಹೇಬ್ ಬೀಡಿ ಗುತ್ತಿಗೆದಾರರು ಮಂಜೊಟ್ಟಿ, ಪ್ರವೀಣ್ ವಿ.ಜಿ ಸದಸ್ಯರು ಗ್ರಾ.ಪಂ ನಡ, ರತ್ನಾಕರ್ ಜೈನ್ ಸದಸ್ಯರು ಗ್ರಂಥಾಲಯ ಸಲಹಾ ಸಮಿತಿ ಹಾಗೂ ಗ್ರಂಥಾಲಯದ ಹಿರಿಯ ಓದುಗರು, ಜಯ ಟೈಲರ್ ಸುರ್ಯ, ಜಾಕೀರ್ ಹುಸೈನ್ ಆಟೋ ಚಾಲಕರು ಬೆದ್ರಪಲ್ಕೆ, ಹಾಗೂ ಶ್ರೀ ಜನಾರ್ಧನ ಗೌಡ ಸಿವಿಲ್ ಗುತ್ತಿಗೆದಾರರು ಉಜಿರೆ ಇವರುಗಳು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿ ಮಕ್ಕಳು , ಮಕ್ಕಳ ಪೋಷಕರು, ಸುಗಮಗಾರರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾಗಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ಮತ್ತು ಸುಗಮಗಾರರಾಗಿ ಭಾಗವಹಿಸಿದವರಿಗೆ ಹಾಗೂ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ ದಾನಿಗಳಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ ಪ್ರಾರ್ಥಿಸಿದರು, ಗ್ರಾ.ಪಂ ಸಿಬ್ಬಂದಿ ಶ್ರೀಮತಿ ಮೀನಾಕ್ಷಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕಿರಣ್ ಎಂ ಸ್ವಾಗತಿಸಿದರು, ಪಂ.ಅ.ಅಧಿಕಾರಿ ಶ್ರೀನಿವಾಸ ಡಿ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗ್ರಾ.ಪಂ ಸಿಬ್ಬಂದಿ ದಿವಾಕರ ಧನ್ಯವಾದವಿತ್ತರು, ಗ್ರಾ.ಪಂ ಸಿಬ್ಬಂದಿಗಳು ಹಾಗೂ ಶ್ರೀಮತಿ ಸುಜಾತ, ಎಂ.ಬಿ.ಕೆ ಸಂಜೀವಿನಿ ಸ್ವ ಸಹಾಯ ಸಂಘ ಸಹಕರಿಸಿದರು.