ಬೆಳ್ತಂಗಡಿ: ಇಲ್ಲಿನ ಐಬಿ ರಸ್ತೆಯಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರು ಹಾಗೂ ಒಬ್ಬರು ಇಂಜಿನಿಯರ್ ಕಚೇರಿಯ ಬಾಗಿಲಿನ ಮುಂಭಾಗದಲ್ಲಿ ಕಂಕುಮ ಚೆಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ಐಬಿ ರಸ್ತೆಯಲ್ಲಿರುವ ವಿಘ್ನೇಶ್ ಸಿಟಿ ವಾಣಿಜ್ಯ ಸಂಕಿರ್ಣದ ಒಂದನೆ ಮಹಡಿಯಲ್ಲಿರುವ ಸಂತೋಷ್ ಕುಮಾರ್, ಗಂಗಾಧರ ಪೂಜಾರಿ ವಕೀಲರ ಕಚೇರಿಯ ಬಾಗಿಲ ಮುಂದೆ ಹಾಗೂ ಸಿದ್ದಿವಿನಾಯಕ ಆಸೋಸಿಯೇಟ್ಸ್ ಇಂಜಿನಿಯರ್ ಕಚೇರಿ ಮುಂದೆ ಇಂದು ಬೆಳಿಗ್ಗೆ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ. ಅದೇ ರೀತಿ ಮಹಿಳಾ ಒಕ್ಕೂಟ ಕಟ್ಟಡದಲ್ಲಿರುವ ವಕೀಲರಾದ ಮನೋಹರ ಇಳಂತಿಲರ ಕಚೇರಿಯ ಬಾಗಿಲಿನ ಮುಂದೆಯೂ ಇದೇ ರೀತಿ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ.
ನಾಲ್ಕು ಮಂದಿಯ ಕಚೇರಿಯ ಬಾಗಿಲು ಎದುರು ಕುಂಕುಮ ಚೆಲ್ಲಿರುವ ಉದ್ದೇಶ ಏನುಗೊತ್ತಾಗಿಲ್ಲ.ಈ ಕಟ್ಟಡದಲ್ಲಿ ಹಲವು ಕಚೇರಿಗಳಿದ್ದರೂ, ನಾಲ್ಕು ಕಚೇರಿಯ ಎದರು ಮಾತ್ರ ಕುಂಕುಮ ಚೆಲ್ಲಿರುವುದು ಕುತೂಲಹಕ್ಕೆ ಕಾರಣವಾಗಿದೆ.