ಬೆಳ್ತಂಗಡಿ: ರಾಜಕೀಯ ಪ್ರೇರಿತ ಷಡ್ಯಂತ್ರಕ್ಕೆ ಇನ್ನೊಂದು ಜೀವ ಬಲಿಯಾಗಿದೆ. ಕೊಲೆ ಮಾಡುವಂತ ಮನಸ್ಥಿತಿಗೆ ಧಿಕ್ಕಾರವಿದೆ, ಕೊಲೆಯಾಗುವುದು ಯಾವುದೇ ನಾಯಕರ ಮಕ್ಕಳಲ್ಲ, ಅಮಾಯಕ ಜೀವಗಳೆಂದು ತಿಳಿದಿರಲಿ, ಹೋದ ಜೀವ ಬರಲಾರದು ಆದರೆ ಇರುವ ಜೀವಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಲಿ, ಜಿಲ್ಲೆಯಲ್ಲಿ ಮತ್ತೆ ಶಾಂತಿ, ಸೌಹಾರ್ದತೆ ಮೆರೆಯಲಿ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ತಿಳಿಸಿದರು.