23.8 C
ಪುತ್ತೂರು, ಬೆಳ್ತಂಗಡಿ
May 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೊಸಂಗಡಿ-ಪುದುವೆಟ್ಟು ಗ್ರಾ.ಪಂ.ಗಳಲ್ಲಿ ತೆರವಾದ ತಲಾ ಒಂದು ಸ್ಥಾನಕ್ಕೆ ಉಪಚುನವಾಣೆ: ಹೊಸಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಬಂಗೇರ ಜಯ: ಪುದುವೆಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮೀ ಜಯ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ಗ್ರಾಮ ಪಂಚಾಯತ್‌ಗಳ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಮೇ 25 ರಂದು ಉಪಚುನವಾಣೆ ನಡೆಯಿತು. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಮತ್ತು ಪುದುವೆಟ್ಟು ಗ್ರಾಮ ಪಂಚಾಯತ್ ಉಪಚುನವಾಣೆಯಲ್ಲಿ ಹೊಸಂಗಡಿ ಗ್ರಾ.ಪಂ. ಮೂರನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಕೊಡಿಂಗೇರಿ ಮತ್ತು ಪುದುವೆಟ್ಟು ಗ್ರಾ.ಪಂ. ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮಿ ಜಯಗಳಿಸಿದ್ದಾರೆ.

ಆನಂದ-457
ಹೊಸಂಗಡಿ ಗ್ರಾಮದ ಮೂರನೇ ವಾರ್ಡ್ ಸದಸ್ಯ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಹರಿಪ್ರಸಾದ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು ತೆರವಾದ ಸ್ಥಾನಕ್ಕೆ ಉಪ ಚುನವಾಣೆ ಏರ್ಪಟ್ಟಿದ್ದು. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಕೊಡಿಂಗೇರಿ ಅವರು 457 ಮತಗಳನ್ನು ಪಡೆದು ಸುನಿಲ್ ಶೆಟ್ಟಿ ಬಿ. ಅವರನ್ನು ಪರಭಾವಗೊಳಿಸಿದರು. ಒಟ್ಟು 1023 ಮತದಾರರ ಪೈಕಿ735 ಮತ ಚಲಾವಣೆಯಾಗಿದ್ದು ಈ ಪೈಕಿ 731 ಮತಗಳು ಕ್ರಮಬದ್ಧವಾಗಿ ಚಲಾವಣೆಗೊಂಡಿದ್ದು 4ಮತಗಳು ತಿರಸ್ಕೃತಗೊಂಡಿದೆ. ಪರಭಾವಗೊಂಡ ಸುನಿಲ್ ಶೆಟ್ಟಿ ಬಿ, ಅವರು 274 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಗಣೇಶ್ ರಾಮಚಂದ್ರ ಭಟ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹೊಸಂಗಡಿ ಗ್ರಾ.ಪಂ.ಪಂ.ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕರ್ತವ್ಯ ನಿರ್ವಹಿಸಿದರು.

ಜಯಲಕ್ಷ್ಮೀ-372
ಪುದುವೆಟ್ಟು ಗ್ರಾಮ ಪಂಚಾಯತ್ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ, ಅಧ್ಯಕ್ಷರಾಗಿದ್ದ ಅನಿತಾ ರವರ ಮೇಲೆ ಸದಸ್ಯರ ಅವಿಶ್ವಾಸ ಗುರುತುಪಡಿಸಿ, ಬಳಿಕ ಅಧ್ಯಕ್ಷ ಸ್ಥಾನ ತೆರವಾಗಿ, ಅವರು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ ತೆರವಾಗಿರುವ ಒಂದು ಸಾಮಾನ್ಯ ಮಹಿಳಾ ಸ್ಥಾನಕ್ಕೆ ಉಪ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮೀ ಅವರು 372 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧು.ಕೆ.ಎಸ್120 ಮತಗಳಿಂದ ಸೋಲು ಕಂಡರು. ಒಟ್ಟು 807 ಮತದಾರರಲ್ಲಿ 496 ಮತಗಳ ಚಲಾವಣೆಗೊಂಡಿದ್ದು ಈ ಪೈಕಿ 492 ಮತಗಳು ಕ್ರಮ ಬದ್ಧವಾಗಿ ಚಲಾವಣೆಯಾಗಿದ್ದು 4 ಮತಗಳು ತಿರಸ್ಕೃತಗೊಂಡಿದೆ. ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಅಧಿಕಾರಿ ಗಣೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಪುದುವೆಟ್ಟು ಗ್ರಾ.ಪಂ.ಪಂ.ಅಭಿವೃದ್ಧಿ ಅಧಿಕಾರಿ ರವಿ ಬನಪ್ಪ ಗೌಡ್ರ ಕರ್ತವ್ಯ ನಿರ್ವಹಿಸಿದರು.

ಎ.22 ರಂದು ಚುನಾವಣಾ ಅಧಿಸೂಚನೆ ಮತ್ತು ಮೇ 11 ಮತದಾನ, 14 ರಂದು ಫಲಿತಾಂಶ ಪ್ರಕಟ ಎಂದು ಈ ಮೊದಲು ರಾಜ್ಯ ಚುನಾವಣಾ ಆಯೋಗವು ಘೋಷಿಸಿತ್ತು. ಆದರೆ 15 ದಿನಗಳ ಕಾಲ ಮೂಂದೂಡಿ ಉಪಚುನಾವಣೆ ನಡೆಯಿತು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308 ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಯಲ್ಲಿತ್ತು.

Related posts

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳು: ಗಂಟೆಗಟ್ಟಲೇ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಣಿಯೂರು ಗುತ್ತು ಮನೆಗೆ ಭೇಟಿ

Suddi Udaya

ಎಸ್.ಡಿ.ಎಂ. ಬಿ.ಎಡ್., ಮತ್ತು ಡಿ.ಎಡ್. ಕಾಲೇಜು ಹಾಗೂ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜುಗಳ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಪುದುವೆಟ್ಟು ಶ್ರೀಧ.ಮಂ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನಾಚರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya
error: Content is protected !!