27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ

ಬೆಳ್ತಂಗಡಿ: ಬೆಂಬೊ ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಬೆಳ್ತಂಗಡಿ ಮತ್ತು ಗುರುವಾಯನಕೆರೆ., ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಘಟಕ ಉಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ತರಬೇತಿ ನಡೆಸಲಾಯಿತು.

ಬೆಳ್ತಂಗಡಿ ಹಾಗೂ ಗುರುವಾಯನಕೆರೆ ತಾಲೂಕಿನ ಆಯ್ದ ರೈತರಿಗೆ ಬಿದಿರು ನಾಟಿಯ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಕೃಷಿ ವಿಭಾಗ ಕೇಂದ್ರ ಕಚೇರಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮೀನೇಜಸ್ ಉದ್ಘಾಟಿಸಿ ಕಾರ್ಯಕ್ರಮದ ಪ್ರಯೋಜನ, ಬೆಂಬೋ ಸೊಸೈಟಿಯಿಂದ ಸಿಗುತ್ತಿರುವ ಸಹಕಾರ ಹಾಗೂ ಬಿದಿರು ಕೃಷಿ ಅನುಷ್ಠಾನಗೊಳಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಬೊ ಸೊಸೈಟಿ ಅಪ್ ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ ಕೆ.ಏನ್.ಮೂರ್ತಿ ಇವರು ಬಿದಿರು ನಾಟಿ, ಬೇಕಾದ ದಾಖಲಾತಿ, ಪ್ರೋತ್ಸಾಹ ಧನ, ಮುಂದಿನ ದಿನದಲ್ಲಿ ಬಿದಿರಿಗೆ ಅತಿ ಬೇಡಿಕೆ ಇದ್ದು ಬಿದಿರು ಕೃಷಿಯ ಪೂರ್ಣ ಮಾಹಿತಿ ಹಾಗೂ ಇತ್ಯಾದಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.


ಬೆಳ್ತಂಗಡಿ ರಬ್ಬರ್ ಸೊಸೈಟಿ ರಾಜು ಶೆಟ್ಟಿ ಬಿದಿರು ಕೃಷಿ ಅನುಷ್ಠಾನಿಸುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯಧಿಕಾರಿ ತ್ಯಾಗರಾಜ್ ಅರಣ್ಯ ಇಲಾಖೆಯಿಂದಲೂ ಬಿದಿರು ಕೃಷಿಗೆ ಉತ್ತಮ ಪ್ರೋತ್ಸಾಹ ಇದ್ದು ಸದಸ್ಯರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯಾದ ಯಶೋದರ, ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್, ಕೇಂದ್ರ ಕಚೇರಿ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಾಗೂ ಮಾರುತಿ , ಬಿದಿರು ಕೃಷಿ ಅನುಷ್ಠಾನದ ಮೇಲ್ವಿಚಾರಕರಾದ ಕುಮಾರ್, ಈಗಾಗಲೇ ಬಿದಿರು ಕೃಷಿ ಮಾಡಿರುವ ಪರಿಣಿತ ರೈತರು, ತಾಲೂಕಿನ ಆಯ್ದ ರೈತರು ಉಪಸ್ಥಿತಿ ಇದ್ದು ಮಾಹಿತಿಯನ್ನು ಸಂವಾದದ ಮೂಲಕ ಮಾಹಿತಿ ಪಡೆದುಕೊಂಡರು.


ಉಚಿತವಾಗಿ ಬಿದಿರು ಗಿಡ ಬೇಕಾದವರು 9482340154 / 8660891480 ಸಂಪರ್ಕಿಸಬಹುದಾಗಿದೆ.

.

Related posts

ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಮುಂಡಾಜೆ: ಸೊಮಂತ್ತಡ್ಕ ನಿವಾಸಿ ಸಾವಿತ್ರಿ ನಿಧನ

Suddi Udaya

ಪಿಲ್ಯ: ಸದಾಶಿವ ಆಠವಳೆ ನಿಧನ

Suddi Udaya

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತದಾನ

Suddi Udaya

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!