September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೇ 31: ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ ಶೋರೂಮ್ ಉದ್ಘಾಟನೆ

ಬೆಳ್ತಂಗಡಿ: ವಸ್ತ್ರ ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಅನುಭವ ಹೊಂದಿರುವ, ಈಗಾಗಲೇ ಹಲವು ಶಾಖೆಗಳನ್ನು ಹೊಂದಿ ವಿಸ್ತಾರವಾಗಿ ಬೆಳೆದಿರುವ ಅತ್ಯಂತ ಜನಪ್ರಿಯ ಮಳಿಗೆ ಧೂಮ್ ಧಮಾಕಾ ಡಿಡಿ ಗ್ರೂಪ್ಸ್ ಇದರ ವತಿಯಿಂದ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಉಜಿರೆ ಮಲ್ಟಿ ಶೋರೂಮ್ ಉಜಿರೆ ಎಸ್‌ಡಿಎಂ ಕಾಲೇಜು ರಸ್ತೆಯ ಬೆಳಾಲು ಕ್ರಾಸ್ ಬಳಿಯ ಸಮೃದ್ದಿ ಕಟ್ಟಡದಲ್ಲಿ ಮೇ 31 ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.


ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮತ್ತು ಅವರ ನಾಲ್ವರು ಮಕ್ಕಳಾದ ಇರ್ಫಾನ್, ಇಮ್ರಾನ್, ಸಿನಾನ್ ಮತ್ತು ಶಿಮ್ರಾನ್ ಇವರ ಮಾಲಕತ್ವದ ಈ ಮಳಿಗೆ ಡಿ.ಡಿ ಗ್ರೂಪ್ಸ್ನ ಯಶಸ್ವಿ 15 ನೇ ಮಳಿಗೆ. ಬೆಳೆಯುತ್ತಿರುವ ಉಜಿರೆ ಶೈಕ್ಷಣಿಕ ನಗರಿಗೆ ಇದೊಂದು ಅಭೂತಪೂರ್ವ ಕೊಡುಗೆಯಾಗಿ ಶನಿವಾರ ಸಮರ್ಪಿತವಾಗಲಿದೆ. ಒಂದೇ ಸೂರಿನಡಿ ಮಹಿಳೆಯರ, ಪುರುಷರ, ಗಂಡು ಮಕ್ಕಳ, ಹೆಣ್ಣು ಮಕ್ಕಳ ಪ್ರಪ್ರತ್ಯೇಕ ಬ್ರಾಂಡೆಡ್ ಮತ್ತು ಸಾಮಾನ್ಯ ಉಡುಪುಗಳು, ಒನ್ ಗ್ರಾಂ ಗೋಲ್ಡ್ ಮತ್ತು ಆಂಟಿಕ್ ಮಾದರಿಯ ಆಭರಣಗಳು, ಮಹಿಳೆಯರ ಸ್ಟೆöÊಲಿಶ್ ಬ್ಯಾಗ್‌ಗಳು, ಚಪ್ಪಲ್ ಮತ್ತು ಶೂಸ್‌ಗಳು ಒಂದೇ ಕಡೆ ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.


ಉಪ್ಪಿನಂಗಡಿಯ ಪ್ರಥಮ ಮಳಿಗೆಯಿಂದ ತನ್ನ ಚೈತ್ರಯಾತ್ರೆ ಆರಂಭಿಸಿರುವ ಡಿ.ಡಿ (ಧೂಮ್ ಧಮಾಕಾ) ಇಂದು ಉಪ್ಪಿನಂಗಡಿ, ಬೆಳ್ತಂಗಡಿ, ಮಡಂತ್ಯಾರು, ಗುರುವಾಯನಕೆರೆ, ಮೂಡಿಗೆರೆ, ಚಿಕ್ಕಮಗಳೂರು ಇಲ್ಲೆಲ್ಲಾ ಶಾಖೆಗಳನ್ನು ಹೊಂದಿದ್ದು ಗ್ರಾಹಕ ಸ್ನೇಹಿಯಾಗಿ, ವಿಶ್ವಾಸಾರ್ಹತೆ ಮೂಲಕ ಬೆಳೆದು ನಿಂತಿದೆ.


ಪ್ರಖ್ಯಾತ ಕಂಪೆನಿಗಳ ವಸ್ತ್ರಗಳ ಅಪೂರ್ವ ಸಂಗ್ರಹ, ಜನಸಾಮಾನ್ಯರ ಆಯ್ಕೆಯ ವಸ್ತ್ರ ಗಳ ಯತೇಚ್ಛ ಲಭ್ಯತೆ, ವಿಶಾಲವಾದ ಹವಾನಿಯಂತ್ರಿತ ವ್ಯವಸ್ಥೆ, ಗ್ರಾಹಕರಿಗೆ ವಾಶ್ ರೂಂ ಮತ್ತು ಲೇಡಿಸ್ ಕಾರ್ನರ್ ಎಲ್ಲಾ ಸೌಕರ್ಯಗಳನ್ನೂ ಒಳಗೊಂಡು ಮಾದರಿಯಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದರುಗಳು, ಸಾದಾತುಗಳು, ಉಜಿರೆಯ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಮುಂದಾಳುಗಳು, ವಿಶೇಷವಾಗಿ ಉದ್ಯಮ ಕ್ಷೇತ್ರದಲ್ಲೇ ಪ್ರಸಿದ್ಧರಾಗಿರುವ ಅಗ್ರಗಣ್ಯ ಅತಿಥಿಗಳು ಹಾಗೂ ಸರ್ವ ಧರ್ಮೀಯರ ಸಮಕ್ಷಮ ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಸಂಸ್ಥೆಯ ಸ್ಥಾಪಕ ಪ್ರೇರಕರಾಗಿರುವ ಖ್ಯಾತ ಉದ್ಯಮಿ ಸಚಿನ್ ಸುಂದರ್ ಉಪ್ಪಿನಂಗಡಿ, ಮಹಿಳಾ ಉದ್ಯಮಿಗಳ ಪೈಕಿ ಉನ್ನತ ಸ್ಥಾನದಲ್ಲಿರುವ ಅರ್ಚನಾ ರಾಜೇಶ್ ಪೈ ಉಜಿರೆ, ಶೈಕ್ಷಣಿಕ ಪ್ರಗತಿಯಲ್ಲಿ ಸಹಾಯಕ ಆಯುಕ್ತರಾಗಿ (ಎ.ಸಿ.) ಸೇವೆಯಲ್ಲಿರುವ ಉಜಿರೆಯ ಡಾ. ಔದ್ರಾಮ ಅಬ್ದುಲ್ ರಹಿಮಾನ್ ಅವರಿಗೆ ನಾಡಿನ ಗೌರವದ ನೆಲೆಯಲ್ಲಿ ಸನ್ಮಾನ ನಡೆಯಲಿದೆ ಎಂದು ಮಾಲಕರಾದ ಅಬ್ದುಲ್ ರಝಾಕ್ ಮತ್ತು ಮಕ್ಕಳು ತಿಳಿಸಿದ್ದಾರೆ.

Related posts

ಎಸ್‌ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಕಾರ್ಯಾಗಾರ

Suddi Udaya

ಗೇರುಕಟ್ಟೆ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

Suddi Udaya

ಮೊಗ್ರು: ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ

Suddi Udaya

ವೇಣೂರು ಯುವವಾಹಿನಿ ಘಟಕದ ವತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮ

Suddi Udaya

ಗುಂಡ್ಯ: ನಿಂತಿದ್ದ ಕಾರಿನ ಮೇಲೆ ಮಗುಚಿ ಬಿದ್ದ ಕಂಟೇನರ್: ಪ್ರಾಣಾಪಾಯದಿಂದ ಪಾರಾದ ಐವರು

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!