23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಕರಾಯ: ಶ್ರೀ ಕೃಷ್ಣ ಭಜನಾ ಮಂದಿರ(ರಿ.) ಕರಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ.)ಗುರುವಾಯನಕೆರೆ ತಾಲೂಕು , ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ತಣ್ಣೀರುಪಂತ ವಲಯ ಇವರ ಸಹಯೋಗದೊಂದಿಗೆ 7 ದಿನಗಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಭಜನೆ ಮಾಡುವುದರಿಂದ ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಗೆ ಬರುವುದರ ಜೊತೆಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವಂತಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಜಗದೀಶ್ ಶೆಟ್ಟಿ ಮೈರ ತಿಳಿಸಿದರು.


ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ ಜಿಲ್ಲೆಯ ನಿರ್ದೇಶಕ ದಿನೇಶ್ .ಡಿ ರವರು ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುತ್ತೇವೆ ಅದರ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಿದಾಗ ಮಕ್ಕಳ ಜೀವನವು ಉತ್ತಮವಾಗಿರುತ್ತದೆ. ಹಾಗೂ ಪಂಚೇಂದ್ರಿಯಗಳ ಏಕಾಗ್ರತೆಗೆ ಮುಖ್ಯ ಕಡಿವಾಣ ಭಜನೆ ಆದುದರಿಂದ ಎಲ್ಲರೂ ಭಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.


ಬೆಳ್ತಂಗಡಿ ತಾಲೂಕಿನ ಭಜನಾ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ ಭಟ್ ರವರು ಭಜನೆ ಮಾಡಿದ್ದಲ್ಲಿ ವಿಭಜನೆ ಇಲ್ಲ ಆದುದರಿಂದ ಪ್ರತಿಯೊಂದು ಮನೆಯಲ್ಲಿ ಭಜನೆ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿ ಅಶೋಕ್ , ತಣ್ಣೀರುಪಂತ ವಲಯದ ಭಜನಾ ಪರಿಷತ್ ನ ಉಪಾಧ್ಯಕ್ಷ ಸೇಷಪ್ಪ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಅನಂತಕೃಷ್ಣ ಕುದ್ದನಾಯ, ಕರಾಯ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಪ್ರಿಯ ಕುಶಾಲಪ್ಪಗೌಡ ,ಕೃಷ್ಣ ಭಜನಾ ಮಂದಿರದ ಹಿರಿಯ ಸದಸ್ಯರಾದ ಮಾಧವ ಶೆಟ್ಟಿ ಮೈರಾ, ಕರಾಯ ಭಜನಾ ಮಂಡಳಿಯ ಮಹಿಳಾ ಸದಸ್ಯರಾದ ಪ್ರಮೀಳಾ ಸುದರ್ಶನ ಕೊಲ್ಲಿ , ತಣ್ಣೀರುಪಂಥ ವಲಯದ ವಲಯ ಒಕ್ಕೂಟದ ಅಧ್ಯಕ್ಷ ರಾಜಶೇಖರ್ ರೈ, ಸೇವಾ ಪ್ರತಿನಿಧಿಯಾದ ಸುಜಾತ ಹಿರಿಯರಾದ ಗೋಪಾಲಕೃಷ್ಣ ಪೈ ಉಪಸ್ಥಿತರಿದ್ದರು.


ನಿವೃತ್ತ ಶಿಕ್ಷಕರಾದ ಯುವರಾಜ್ ಅನಾರ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ್ ಗೌಡ ಸ್ವಾಗತಿಸಿ, ವಲಯದ ಮೇಲ್ವಿಚಾರಕ ವಿಶ್ವನಾಥ್ ಪೂಜಾರಿ ಧನ್ಯವಾದವಿತ್ತರು.

Related posts

ಟೆಲಿಗ್ರಾಮ್‌ ಆಪ್‌ ಮೂಲಕ ಹಣ ವರ್ಗಾಹಿಸಿ ಮೋಸ: ಕುವೆಟ್ಟು ನಿವಾಸಿ ನುಪೈಲಾ ರಿಗೆ ರೂ. 6.95 ಲಕ್ಷ ವಂಚನೆ

Suddi Udaya

ಸರಕಾರದಿಂದ 2024ರ ಸಾರ್ವತ್ರಿಕ ರಜೆ ದಿನ ಪ್ರಕಟ

Suddi Udaya

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್-ರೇಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಮತ್ತು ಸಾಂಸ್ಕೃತಿಕ ವೇದಿಕೆ ಇವುಗಳ ಸಹಯೋಗದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಶಿರ್ಲಾಲು ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ನಿಧನ

Suddi Udaya

ಅಪಾಯಕಾರಿ ಸ್ಥಳಗಳಿರುವ ಮನೆಗಳಿಗೆ ಮೇಲಂತಬೆಟ್ಟು ಗ್ರಾಮ ಪಂಚಾಯತಿನಿಂದ ಮತ್ತೊಮ್ಮೆ ನೋಟೀಸು

Suddi Udaya

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಡಿ.ಎ ರಹಿಮಾನ್ ಅವರಿಗೆ ಪತ್ನಿ‌ ವಿಯೋಗ

Suddi Udaya
error: Content is protected !!