37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ-ಪವರ್‌’ಫುಲ್ ಅಧಿಕಾರಿಗಳ ಎಂಟ್ರಿ ಎಸ್ಪಿಯಾಗಿ ಅರುಣ್ ಕುಮಾ‌ರ್, ಕಮೀಷನ‌ರ್ ಆಗಿ ಸುಧೀರ್ ಕುಮಾ‌ರ್ ರೆಡ್ಡಿ

ಬೆಳ್ತಂಗಡಿ: ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದಾರೆ. ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನ‌ರ್ ಅಗರ್‌’ವಾಲ್‌ ವರ್ಗಾವಣೆಗೊಂಡಿದ್ದಾರೆ.

2017ರಲ್ಲಿ ದ.ಕ ಎಸ್ಪಿಯಾಗಿ ಹೊಸ ಭಾಷ್ಯ ಬರೆದಿದ್ದ ಸುಧೀ‌ರ್ ಕುಮಾ‌ರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನ‌ರ್ ಆಗಿ ಬರುತ್ತಿದ್ದಾರೆ. ಅದೇ ರೀತಿ ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.ಸುಧೀರ್ ಕುಮಾರ್ ರೆಡ್ಡಿ ಹೆಸರು ಕೇಳಿದರೇನೆ ಕೆಲವರಿಗೆ ಸಣ್ಣಗೆ ಬೆನ್ನುಹುರಿಯಲ್ಲಿ ನಡುಕ ಶುರು ಆಗುತ್ತದೆ.

ದಕ ಎಸ್ಪಿಯಾಗಿದ್ದ ಸಂದರ್ಭ ಅವರ ಕಾರ್ಯವೈಖರಿಯೇ ಇದಕ್ಕೆ ಕಾರಣ. ಹಲವು ಕಾರ್ಯಾಚರಣೆಗಳ ಮೂಲಕ ಮನೆಮಾತಾದವರು.ದಕದಿಂದ ಬೆಳಗಾವಿಗೆ ಎಸ್ಪಿಯಾಗಿ ತೆರಳಿದ ಅವರು, ನಂತರ ಆಂಧ್ರಕ್ಕೆ ವರ್ಗಾವಣೆ ಆಗಿದ್ದರು. ನಂತರ ರಾಜ್ಯದ ಗುಪ್ತಚರ ವಿಭಾಗದ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಬೂದಿ ಮುಚ್ಚಿದ ಕೆಂಡದಂತಿರುವ ದ.ಕ.ಕ್ಕೆ ಕಮೀಷನರ್ ಆಗಿ ಬರುತ್ತಿದ್ದಾರೆ.

ಅರುಣ್ ಕುಮಾರ್ ಕೂಡ ಉಡುಪಿಯಲ್ಲಿ ತಮ್ಮ ಐಪಿಎಸ್ ಖದ‌ರ್ ತೋರಿಸಿ, ಜನರಲ್ಲಿ ಆರಕ್ಷಕರ ಬಗೆ ಗೌರವ ಮೂಡುವಂತಹ ಕೆಲಸ ಮಾಡುತ್ತಿದ್ದಾರೆ ಈ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ: ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ , ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ

Suddi Udaya

ಕುವೆಟ್ಟು: ಕೇದಳಿಕೆ ನಿವಾಸಿ ಬಾಬು ನಾಯ್ಕ್ ನಿಧನ

Suddi Udaya

ನಾವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಆಯ್ಕೆ

Suddi Udaya

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ “ಶಿಕ್ಷಕರ ದಿನ” ಆಚರಣೆ

Suddi Udaya
error: Content is protected !!