September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಆಯ್ಕೆ

ನಾವರ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ನಾವರ ಗೋಳಿಕಟ್ಟೆ ಇದರ ಪದಾಧಿಕಾರಿಗಳ ಆಯ್ಕೆಯು ಸೆ.29 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


21 ನೇ ವರ್ಷದ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಕುಲಾಲ್ ದೇವರಗುಡ್ಡೆ ಮತ್ತು ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಹಿಮರಡ್ಡ ಕುದ್ಯಾಡಿ ಇವರನ್ನು ಆಯ್ಕೆ ಮಾಡಲಾಗಿದೆ.


2024 ರ ಶಾರದಾ ಪೂಜಾ ಮಹೋತ್ಸವ ಅ.9 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಒಂದೇ ದಿನ ಪೂಜಾ ಕೆಲಸಕಾರ್ಯ ನಡೆಯಲಿದೆ.
ಸಂಜೆ ಅಳದಂಗಡಿ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಫಲ್ಗುಣಿ ನದಿಯಲ್ಲಿ ಶಾರದಾ ದೇವಿ‌ ಮಣ್ಣಿನ ‌ಮೂರ್ತಿಯ ವಿಸರ್ಜನೆ ನಡೆಯಲಿರುವುದು.

ಸಭೆಯಲ್ಲಿ ಪ್ರಧಾನ ಸಂಚಾಲಕರಾದ ವಿಜಯ ಕುಮಾರ್ ಜೈನ್, ಸಂಚಾಲಕರಾದ ರಾಜೂ ಸಾಲ್ಯಾನ್, ವೀರೇಂದ್ರ ಕುಮಾರ್ ರಾಜಪಾದೆ, ರವಿ ಪೂಜಾರಿ ಹಾರಡ್ಡೆ, ನಿತ್ಯಾನಂದ ಯೋಗ ಕ್ಷೇಮ ನಾವರ, ಸದಾನಂದ ಬಿ.ಕುದ್ಯಾಡಿ ಮುಂತಾದವರು ಉಪಸ್ಥಿತರಿದ್ದರು.

Related posts

ಪ್ಲಾಂಟೇಶನ್ ಬೆಳೆಗಳನ್ನು ಗುತ್ತಿಗೆ ನೀಡಲು ಅರ್ಜಿ ಆಹ್ವಾನ: ಜುಲೈ 15 ರವರೆಗೆ ಕಾಲಾವಕಾಶ

Suddi Udaya

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಣಿಜನ್ಯ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಅಳದಂಗಡಿ ವರಮಹಾಲಕ್ಮಿ ಪೂಜಾ ಸಮಿತಿಯಿಂದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಪಡಂಗಡಿ: ಅಪಾಯಕಾರಿ ಮರದ ಕೊಂಬೆಗಳ ತೆರವು

Suddi Udaya

ಕಾಯರ್ತಡ್ಕ : ಯುವತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!