23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿವರದಿ

ಕೆದ್ದುನಲ್ಲಿ ಕಾರು ಡಿಕ್ಕಿ:ಬೈಕ್ ಸವಾರಿಬ್ಬರಿಗೆ ಗಾಯ

ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ಕೆದ್ದುನಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಗಾಯಗೊಂಡ ಘಟನೆ ಮೇ 29ರಂದು ನಡೆದಿದೆ.

ಬಡಗಕಾರಂದೂರು ಗ್ರಾಮದ ಕೆದ್ದು ಎಂಬಲ್ಲಿ ಗುರುವಾಯನಕೆರೆ-ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಕಾರು ನಂಬ್ರ KA 19 MB 0596 ನೇ ಕಾರನ್ನು ಅದರ ಚಾಲಕ ಹರೀಶ್ ಪೂಜಾರಿ ಎಂಬವರು ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ತಿರುವು ರಸ್ತೆಯಲ್ಲಿ ಬಳಿ ನಿರ್ಲಕ್ಷ್ಯತನದಿಂದ ಚಲಾಯಿಸಿ ಬಂದು, ನಾರಾವಿ ಕಡೆಯಿಂದ ಅಚ್ಚುತ್ತ ಹೆಗ್ಡೆ ರವರು ತನ್ನ ಅಣ್ಣ ಸುರೇಶ ಹೆಗ್ಡೆ‌ ಜೊತೆ ತನ್ನ ಬೈಕ್ ನಂಬ್ರ KA 70 J 4022 ನೇಯದರಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದರೆನ್ನಲಾಗಿದೆ.

ಪರಿಣಾಮ ವಾಹನಗಳು ಜಖಂಗೊಂಡು ಬೈಕ್ ಸವಾರರು ಬೈಕನೊಂದಿಗೆ ರಸ್ತೆಗೆ ಬಿದ್ದು ಅಚ್ಚುತ್ತ ರವರ ಬಲಕಾಲಿಗೆ ಮುರಿತದ ಗಾಯ,ಬಲಕೈಗೆ,ಹಣೆಗೆ ತರಚಿದ ಗಾಯ ಹಾಗೂ ಸಹಸವಾರ ಸುರೇಶ್ ರವರ ತಲೆಗೆ ರಕ್ತಗಾಯಗಳಾಗಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಆ ಪೈಕಿ ತೀವ್ರಗಾಯಗೊಂಡ ಸುರೇಶ್ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Related posts

ಆರಂಬೋಡಿ: ಕುದುಂಬುಡ -ಕೊಮ್ಮಡ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

Suddi Udaya

ಪುತ್ತೂರು ಗೇರು ಸಂಶೋಧನ ಕೇಂದ್ರದ ಎರಡು ತಳಿ ಪ್ರಧಾನಿಯಿಂದ ಬಿಡುಗಡೆ

Suddi Udaya

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವಿಧಾನಸಭಾ ಕ್ಷೇತ್ರ ಸಮಿತಿ ನೂತನ ಅಧ್ಯಕ್ಷೆಯಾಗಿ ಶಮಾ ಆಯ್ಕೆ

Suddi Udaya

ನಾರಾವಿಯಲ್ಲಿ ನಿರ್ಮಿಸಲಾದ ಚೆಕ್ ಪೋಸ್ಟ್ ಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ, ಪರಿಶೀಲನೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya
error: Content is protected !!