27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಕೊಳ್ತಿಗೆ ಯಕ್ಷಯಾನ 60 ಗ್ರಂಥ ಲೋಕಾರ್ಪಣೆ-ಸನ್ಮಾನ-ತಾಳಮದ್ದಳೆ

ಉಜಿರೆ: ಕೊಳ್ತಿಗೆ ಯಕ್ಷಯಾನ 60, ಗ್ರಂಥ ಲೋಕಾರ್ಪಣೆ-ಸನ್ಮಾನ-ತಾಳಮದ್ದಳೆ ಕಾರ್ಯಕ್ರಮವು ಮೇ 31ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಮಹಾಮಂಡಲೇಶ್ವರ ೧೦೦೮ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಆಶೀರ್ವಚನ ನೀಡಿದರು.

ಜ್ಯೋತಿ ಪ್ರಜ್ವಲನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ. ಸಂಪತ್ ಸುವರ್ಣ, ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು.

ಮಧ್ಯಾಹ್ನ 2-30ರಿಂದ ಯಕ್ಷಗಾನಯಾನ ನಡೆಯಿತು. ಭಾಗವತರಾಗಿ ಕು. ಹೇಮಸ್ವಾತಿ ಕುರಿಯಾಜೆ, ಕು. ಸಿಂಚನಾ ಮೂಡುಕೋಡಿ, ಚೆಂಡೆ-ಮದ್ದಳೆಯಲ್ಲಿ ಶ್ರೇಯಸ್ ಪಾಳಂದ ಅರಸಿನಮಕ್ಕಿ, ಆದಿತ್ಯ ಹೊಳ್ಳ ಉಜಿರೆ ಸಹಕರಿಸಿದರು. ಸಂಜೆ 5-30ರಿಂದ ಭೀಷ್ಮಪರ್ವ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಂ. ದಿನೇಶ್ ಅಮ್ಮಣ್ಣಾಯ , ಬಿ. ಸೀತಾರಾಮ ತೊಲ್ಪಡಿತ್ತಾಯ ,ಬಿ. ಜನಾರ್ದನ ತೊಲ್ಪಡಿತ್ತಾಯ, ಅರ್ಥದಾರಿಗಳಾಗಿ ಡಾ. ಎಂ. ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್ಟ, ವಿಷ್ಣು ಶರ್ಮಾ ವಾಟೆ ವಾಟೆಪಡ್ಪು ಕೆ. ಸುರೇಶ ಕುದ್ರೆಂತ್ತಾಯ, ಕೊಳ್ತಿಗೆ ನಾರಾಯಣ ಗೌಡ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಉಜಿರೆ ಯಕ್ಷ ಪ್ರೇರಣಾ ಸಮಿತಿಯ ಸಂಚಾಲಕರು, ಸದಸ್ಯರುಗಳು, ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದರು..

ಕಾರ್ಯಕ್ರಮದಲ್ಲಿ ಉಜಿರೆ ಮಂಜುಶ್ರೀ ಪ್ರಿಂಟರ್ ನ ಮ್ಯಾನೇಜರ್ ಶೇಖರ್ ಟಿ. ಮತ್ತು ಉಜಿರೆ ಶಾಂತರಾಮ ಜ್ಯುವೆಲ್ಲರ್ಸ್ ನ ಆನಂದ ಆಚಾರ್ಯ ರವರನ್ನು ಸನ್ಮಾನಿಸಲಾಯಿತು.

ಕೊಳ್ತಿಗೆ ನಾರಾಯಣ ಗೌಡರು ಸ್ವಾಗತಿಸಿದರು. ಯಕ್ಷಗಾನ ಕಲಾವಿದ ಅಶೋಕ್ ಭಟ್ ನಿರೂಪಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ವಂದಿಸಿದರು.

Related posts

ಪಿಲಾತಬೆಟ್ಟುನಲ್ಲಿ ಧರ್ಮಸ್ಥಳ ಪೊಲೀಸ್ ಇಲಾಖೆಯ ಬೊಲೆರೋ ಜೀಪ್‌ ಗೆ ಡಿಕ್ಕಿ ಹೊಡೆದ ಸ್ಕೂಟಿ

Suddi Udaya

ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ

Suddi Udaya

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

Suddi Udaya

ಇಂದಬೆಟ್ಟು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ ಸ.ಪ್ರ. ದರ್ಜೆ ಕಾಲೇಜಿನಲ್ಲಿ “ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ” ಎಂಬ ವಿಷಯದ ಕುರಿತು ಕಾರ್ಯಾಗಾರ

Suddi Udaya

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

Suddi Udaya
error: Content is protected !!