25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕೊಡಿಮರ ಸಮರ್ಪಣೆ

ಮಚ್ಚಿನ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವು ನಡೆಯುತ್ತಿದ್ದು ಇದರ ಧ್ವಜಸ್ತಂಭದ ವೃಕ್ಷ ಮುಹೂರ್ತವು ಇತೀಚೆಗೆ ನಡೆದಿದ್ದು. ತಣ್ಣೀರುಪಂತ ಗ್ರಾಮದ ಅಲಕ್ಕೆ ಬೈಲಿನ ಕುಟುಂಬಸ್ಥರು ದಾನವಾಗಿ ನೀಡಿದ ಕೊಡಿ ಮರದ ಮೆರವಣಿಗೆ ಮೇ. 30ರಂದು ಬ್ರಹ್ಮಶ್ರೀ ಡಾ. ದೇರೆಬೈಲ್ ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಂತೆ ಕೊಡಿ ಮರದ ಭವ್ಯ ಮೆರವಣಿಗೆ ಅಲಕ್ಕೆಯಿಂದ ಬಳ್ಳಮಂಜಕ್ಕೆ ಆಗಮಿಸಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ, ಅನಂತರಾಮ್ ಜೋಗಿತ್ತಾಯ, ರಾಜೇಶ್ ಶೆಟ್ಟಿ ನವಶಕ್ತಿ, ಮಾಲಾಡಿ ಜೈ ಮಾತಾ ಲ್ಯಾಮಿನೇಟರ್ಸ್ ವಿಜಯಚಂದ್ರ, ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮೂಡಯೂರು, ಹಿರಿಯ ವಕೀಲರು ಬದರಿನಾಥ್ ಸಂಪಿಗೆತ್ತಾಯ, ಗಂಗಾಧರ್ ಭಟ್, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಸಂತ ಮಜಲು, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ದುಗ್ಗಪ್ಪ ಗೌಡ, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ರಾಜಶೇಖ‌ರ್ ಶೆಟ್ಟಿ, ವಿದ್ಯಾಸಾಗರ ಶಾಲಾ ಸಂಚಾಲಕ ವೆಂಕಟ ರೆಡ್ಡಿ, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕಿಣಿ, ಉಪಾಧ್ಯಕ್ಷೆ ಸೋಮಾವತಿ, ಮಾಜಿ ಅಧ್ಯಕ್ಷರು ಚಂದ್ರಕಾಂತ್ ನಿಡ್ಡಾಜೆ, ಪದ್ಮನಾಭ ಸುವರ್ಣ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ನಾರಾಯಣ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಸುಂದರಿ ಹಾಗೂ ವಿಠಲ ಶೆಟ್ಟಿ ಮತ್ತು ಮಕ್ಕಳು ತಾರೆಮಾರು ಇವರ ವತಿಯಿಂದ ರಂಗಪೂಜೆ ಹಾಗೂ ಅನ್ನದಾನ ನಡೆಯಿತು.

Related posts

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸ್ತಬ್ಧಚಿತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಬಹುಮಾನ

Suddi Udaya

ಗುರುವಾಯನಕೆರೆ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲಿ ಸಾವು

Suddi Udaya

ಜಾತಿನಿಂದನೆ ಮಾಡಿ ವ್ಯಕ್ತಿಯ ಕೊಲೆಗೆ ಯತ್ನ: ನಾವೂರು ನೌಷದ್ ನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ “ಐಸ್ ಬ್ರೇಕಿಂಗ್ ಸೆಷನ್” ಕಾರ್ಯಾಗಾರ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಡಿ.8 (ನಾಳೆ) 11ನೇ ವರ್ಷದ ಪಾದಯಾತ್ರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಧ್ಯಾಹ್ನ 3 ಕ್ಕೆ ಪಾದಯಾತ್ರೆಗೆ ಚಾಲನೆ

Suddi Udaya
error: Content is protected !!