September 6, 2026
Uncategorized

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ತಾಲೂಕು ಮಟ್ಟದ ಸಭೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆ ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.

ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನಾತ್ಮಕವಾದ ಶಕ್ತಿಗೆ ಭಜನೆಯು ಅತಿ ಮುಖ್ಯವಾಗಿದ್ದು, ಎಂದು ಬೆಳ್ತಂಗಡಿ ತಾಲೂಕಿನಲ್ಲಿ ಭಜನಾ ಪರಿಷತ್ತಿನ ವತಿಯಿಂದ ಎಲ್ಲ ಭಜನಾ ಮಂಡಳಿಗಳನ್ನು ಒಂದುಗೂಡಿಸಿಕೊಂಡು, ಸಂಸ್ಕಾರಯುತವಾದ ಬದುಕಿಗೆ ಭಕ್ತಿಯ ಹೆಜ್ಜೆ ಎನ್ನುವ ಮಾತಿನಂತೆ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಇದಕ್ಕಾಗಿ ಎಲ್ಲ ಭಜನಾ ಮಂಡಳಿಗಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸಿದರು.

ರಾಜ್ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖ‌ರ್ ಸಾಲಿಯಾನ್ ಕೊಯ್ಯರು ಇವರು ಪಕ್ಷ ರಾಜಕೀಯ ರಹಿತವಾಗಿ, ಜನ ಸೇರುವುದಕ್ಕಾಗಿ ಭಜನ ಕಾರ್ಯಕ್ರಮ ಅಲ್ಲ ಶ್ರದ್ದೆ ಮತ್ತು ಭಕ್ತಿಗಾಗಿ ಸಂಘಟನೆಗಾಗಿ ಭಜನಾ ಕಾರ್ಯಕ್ರಮ, ಯಾವತ್ತೂ ಶಾಂತತೆಯಿಂದ, ಶ್ರದ್ದಾ ಭಕ್ತಿಯಿಂದ ಭಜನಾ ಪರಿಷತ್ತಿನಲ್ಲಿ ಸೇವೆಯನ್ನು ನೀಡಬೇಕು.ವಲಯ ಸಮಿತಿ ತಾಲೂಕು ಸಮಿತಿಯೊಂದಿಗೆ, ರಾಜ್ಯ ಸಮಿತಿಯೊಂದಿಗೆ ಸೇರಿಕೊಂಡು ಸಮನ್ವತೆಯತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಬೇಕು.ಯಾವುದೇ ಆಡಂಬರ ಇಲ್ಲದೆ ಕಾರ್ಯಕ್ರಮವನ್ನು ಮಾಡಿದಾಗ ಇದು ನಿಜವಾದ ಅರ್ಥತೆ ಬರುತ್ತದೆ ಎನ್ನುವಂತೆ ವಿಚಾರಗೈದರು.

ತಾಲೂಕಿನ ಯೋಜನಾಧಿಕಾರಿ ಯಶೋಧರ್ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹೆಚ್ಚಿಸಲು ಭಜನೆ, ಭಕ್ತಿ ಎಡೆಗೆ ಭಜನೆ, ಭಜನೆಯ ಶಿಸ್ತು ನಮ್ಮ ಬದುಕಿಗೆ ಶಿಸ್ತನ್ನು ನೀಡುತ್ತದೆ ಎಂದರು.ಜನಜಾಗೃತಿ ವೇದಿಕೆಯ ವಲಯದ ಅಧ್ಯಕ್ಷೆ ಪುಷ್ಪಾವತಿ ಆ‌ರ್. ಶೆಟ್ಟಿ ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಂಯೋಜಕ ಸಂತೋಷ್ ಪಿ ಅಳಿಯೂರು ಪ್ರಾಥಮಿಕವಾಗಿ ಮಾತಾಡಿದರು.

ಒಂಬತ್ತು ವಲಯದ ವಲಯದ ಅಧ್ಯಕ್ಷರು,ಉಪಾಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಕೋಶಾಧಿಕಾರಿ ಉಪಸ್ಥಿತರಿದ್ದರು.ನೂತನವಾಗಿ ತಾಲೂಕು ಸಮಿತಿಯ ರಚನೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾಗಿ ಹರೀಶ್ ಕುಮಾ‌ರ್, ಕಾರ್ಯದರ್ಶಿಯಾಗಿ ಚಂದ್ರಶೇಖ‌ರ್, ಉಪಾಧ್ಯಕ್ಷರಾಗಿ ರವಿರಾಜ್ ಚಾರ್ಮಾಡಿ, ಜೊತೆ ಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿಯಾಗಿ ಗಣೇಶ್ ಕನ್ನಾಜೆ ಆಯ್ಕೆಯಾದರು.

ಅರಸಿನಮಕ್ಕಿ ವಲಯದ ವಲಯಾಧ್ಯಕ್ಷ ಕೃಷ್ಣಪ್ಪಗೌಡ ಕೊಕ್ಕಡ, ವಲಯದ ವಲಯ್ಯಾಧ್ಯಕ್ಷೆ ಪ್ರತಿಮಾ, ಲಾಯಿಲ ವಲಯದ ವಲಯಾಧ್ಯಕ್ಷ ಜನಾರ್ಧನ, ಉಜಿರೆ ವಲಯದ ವಲಯಧ್ಯಕ್ಷ ಕೃಷ್ಣಯ್ಯ ಆಚಾರಿ, ಧರ್ಮಸ್ಥಳ ವಲಯದ ವಲಯ ಅಧ್ಯಕ್ಷ ಹರೀಶ್‌ ಬಿ., ನೆರಿಯ ವಲಯದ ವಲಯಾಧ್ಯಕ್ಷ ರಾಜನ್ ಪಿ.ಕೆ., ಇಂದಬೆಟ್ಟು ವಲಯದ ವಲಯ ಅಧ್ಯಕ್ಷ ಶಶಿಧ‌ರ್ ಮನ್ನಡ್ಕ, ಬೆಳ್ತಂಗಡಿ ವಲಯದ ವಲಯಾಧ್ಯಕ್ಷ ಗಣೇಶ್, ಎಲ್ಲಾ ವಲಯದ ಉಪಾಧ್ಯಕ್ಷರು ಕಾರ್ಯದರ್ಶಿ ಜೊತೆ ಕಾರ್ಯದರ್ಶಿ ಕೋಶಾಧಿಕಾರಿ ಉಪಸ್ಥಿತರಿದ್ದರು.

ನೂತನವಾಗಿ ತಾಲೂಕು ಸಮಿತಿಯ ರಚನೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾಗಿ ಹರೀಶ್ ಕುಮಾ‌ರ್, ಕಾರ್ಯದರ್ಶಿಯಾಗಿ ಚಂದ್ರಶೇಖ‌ರ್, ಉಪಾಧ್ಯಕ್ಷರಾಗಿ ರವಿರಾಜ್ ಚಾರ್ಮಾಡಿ, ಜೊತೆ ಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿಯಾಗಿ ಗಣೇಶ್ ಕನ್ನಾಜೆ ಆಯ್ಕೆಯಾದರು.

ಅರಸಿನಮಕ್ಕಿ ವಲಯದ ವಲಯಾಧ್ಯಕ್ಷ ಕೃಷ್ಣಪ್ಪಗೌಡ ಕೊಕ್ಕಡ, ವಲಯದ ವಲಯ್ಯಾಧ್ಯಕ್ಷೆ ಪ್ರತಿಮಾ, ಲಾಯಿಲ ವಲಯದ ವಲಯಾಧ್ಯಕ್ಷ ಜನಾರ್ಧನ, ಉಜಿರೆ ವಲಯದ ವಲಯಧ್ಯಕ್ಷ ಕೃಷ್ಣಯ್ಯ ಆಚಾರಿ, ಧರ್ಮಸ್ಥಳ ವಲಯದ ವಲಯ ಅಧ್ಯಕ್ಷ ಹರೀಶ್‌ ಬಿ., ನೆರಿಯ ವಲಯದ ವಲಯಾಧ್ಯಕ್ಷ ರಾಜನ್ ಪಿ.ಕೆ., ಇಂದಬೆಟ್ಟು ವಲಯದ ವಲಯ ಅಧ್ಯಕ್ಷ ಶಶಿಧ‌ರ್ ಮನ್ನಡ್ಕ, ಬೆಳ್ತಂಗಡಿ ವಲಯದ ವಲಯಾಧ್ಯಕ್ಷ ಗಣೇಶ್, ಎಲ್ಲಾ ವಲಯದ ಉಪಾಧ್ಯಕ್ಷರು ಕಾರ್ಯದರ್ಶಿ ಜೊತೆ ಕಾರ್ಯದರ್ಶಿ ಕೋಶಾಧಿಕಾರಿ ಉಪಸ್ಥಿತರಿದ್ದರು.

ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ಧನ್ ಸ್ವಾಗತಿಸಿದರು. ತಾಲೂಕಿನ ಕೃಷಿ ಅಧಿಕಾರಿ ರಾಮ ಕುಮಾರ್ ನಿರೂಪಿಸಿ, ಉಜಿರೆ ವಲಯದ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿಸಿದರು.

Related posts

ನ್ಯಾಯತರ್ಪು: ಕೊರೆಜಂಡ ಮನೆಗೆ ಸಿಡಿಲು ಬಡಿದು ಬಿರುಕು ಬಿಟ್ಟ ಗೋಡೆ,ಕಿತ್ತು ಹೋದ ವಿದ್ಯುತ್ ವಯರಿಂಗ್

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಗೆ ಶೇ. 100

Suddi Udaya

ಸುಲ್ಕೇರಿ: ಬೀಡಿ ಗುತ್ತಿಗೆದಾರ ಆನಂದ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರ್ ಶ್ರೀಮತಿ ಉಷಾರಾಣಿ ಭೇಟಿ

Suddi Udaya

ನಡ: ಭಾರೀ ಗಾಳಿಗೆ ಮನೆಗೆ ಮರ ಬಿದ್ದು ಹಾನಿ

Suddi Udaya

ನಾವೂರು ಜಯಂತಿ ಸಾಂತಿಪಲ್ಕೆ ನಿಧನ

Suddi Udaya
error: Content is protected !!