25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸಾಧಕರು

ಜೆಇಇ ಅಡ್ವಾನ್ಸ್ ನಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ, ರಾಷ್ಟ್ರ ಮಟ್ಟದಲ್ಲಿ 45 ನೆಯ ರ‍್ಯಾಂಕ್ ಪಡೆದ ವೀರಭದ್ರೇಶ್ ಕಟಗೇರಿ: ಗಗನ ಕುಸುಮವೆನಿಸಿದ ಐಐಟಿ ಪ್ರವೇಶಾತಿ ಎಕ್ಸೆಲ್ ನಿಂದ ಸುಲಭ ಸಾಧ್ಯ : ರಾಷ್ಟ್ರದ ಅತ್ಯಂತ ಕಠಿಣ ಪರೀಕ್ಷೆ ಎಕ್ಸೆಲ್ ವಿದ್ಯಾರ್ಥಿಗಳಿಗೆ ಸಲೀಸು

ಗುರುವಾಯನಕೆರೆ: ಜಗತ್ತಿನ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಐಟಿ ಹಾಗೂ ಎನ್ ಐಐಟಿ ಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.

ಈ ಹಿಂದೆ ನಡೆದ ಜೆಇಇ ಮೈನ್ಸ್ ಶಿಫ್ಟ್ 1 ಮತ್ತು ಜೆಇಇ ಮೈನ್ ಶಿಫ್ಟ್ 2 ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡು ಎಕ್ಸೆಲ್ ನ ಹಲವು ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು.

ಜೆಇಇ ಅಡ್ವಾನ್ಸ್ ಪರೀಕ್ಷೆ ಅತ್ಯಂತ ಪ್ರತಿಭಾವಂತರಿಗೆ ಕೂಡಾ ಗಗನ ಕುಸುಮವಾಗಿರುವ ಸಂದರ್ಭದಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗಳು , ರಾಷ್ಟ್ರದ ಬಹಳ ಕಠಿಣ ಪರೀಕ್ಷೆಯೆನಿಸಿಕೊಂಡ ಜೆಇಇ ಅಡ್ವಾನ್ಸ್ ನಲ್ಲಿ ಅತ್ಯುತ್ತಮ ರಾಂಕ್ ಗಳಿಸಿ ಕೊಳ್ಳಲು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅತ್ಯಂತ ಗುಣಮಟ್ಟದ ಕೋಚಿಂಗ್ ಕಾರಣವಾಗಿದೆ.

ವೀರಭದ್ರೇಶ್ ಕಟಗೇರಿ ರಾಷ್ಟ್ರ ಮಟ್ಟದಲ್ಲಿ- 45 ನೆಯ ರಾಂಕ್,ಪ್ರಥಮ್ ಎಸ್- 247 ನೆಯ ರಾಂಕ್,ರೋಹಿತ್ ಮಂಜ- 1125, ಅನುಜ್ ಕೆ ಎಸ್- 3421, ಮೊಹಮ್ಮದ್ ರುವೈದ್ ರುಕ್ಸಾರ್ – 12308 ರಾಂಕ್ ಗಳಿಸಿಕೊಂಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಸೀಮಿತ ಸೀಟ್ ಗಳಿರುವ ಐಐಟಿಗಳಿಗೆ ತಮ್ಮ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದಕ್ಕೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

Related posts

ಮೊಗ್ರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ಗಂಗಾಧರ ಪೂಜಾರಿ ಆಯ್ಕೆ

Suddi Udaya

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Suddi Udaya

ಸಿರಿ ಕೇಂದ್ರ ಕಚೇರಿಯಲ್ಲಿ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವನಮಹೋತ್ಸವ

Suddi Udaya

ಹುಣಸೆಕಟ್ಟೆಯ ರಸ್ತೆ ಬದಿಯ ಒಣ ಹುಲ್ಲಿಗೆ ಬೆಂಕಿ : ಬೆಂಕಿ ನಂದಿಸಿದ
ಅಗ್ನಿಶಾಮಕ ದಳ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಯಶೋ’ ಯಕ್ಷನಮನ-ಗಾನ-ನೃತ್ಯ-ಚಿತ್ರ

Suddi Udaya
error: Content is protected !!