September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ” ಎಂಬ ಘೋಷ ವಾಕ್ಯದೊಂದಿಗೆ 2025-26ನೇ ಸಾಲಿನ ಪ್ರಾರಂಭೋತ್ಸವವನ್ನು ಜೂ.2ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಕ್ಷೇತ್ರದ ಮಣೆಗಾರರಾದ ವಸಂತ ಭಟ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿ 2025 26ನೇ ಸಾಲಿನ ಶೈಕ್ಷಣಿಕ ವರ್ಷವೂ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಆಶೀರ್ವಾದ ಮಾಡಿದರು.

ನೂತನವಾಗಿ ಸೇರಿದ ಮಕ್ಕಳನ್ನು ಪನ್ನೀರ್ ಹಾಕಿ ಆರತಿ ಮಾಡಿ ಸ್ವಾಗತಿ, ಸ್ಲೇಟು, ಬಳಪ, ಪುಸ್ತಕಗಳನ್ನು ನೀಡಿ ಆತ್ಮೀಯವಾಗಿ ಶಾಲೆಗೆ ಶಿಕ್ಷಕರು ಬರಮಾಡಿಕೊಂಡರು.ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಕಮಲ್ ತೇಜ್ ರಜಪೂತ್, ಹಿರಿಯ ಶಿಕ್ಷಕರಾದ ಜೋಸೆಫ್, ಶ್ರೀಮತಿ ಶ್ರೀಜಾ ಹಾಗೂ ಪೋಷಕ ಸುರೇಶ್ ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕ ಜೋಸೆಫ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶ್ರೀಮತಿ ಪೂರ್ಣಿಮಾ ಕೆ.ಎಂ ನಿರೂಪಿಸಿದ ಕಾರ್ಯಕ್ರಮವನ್ನು ಶ್ರೀಮತಿ ಶ್ರೀಜಾ ಸ್ವಾಗತಿಸಿ, ಶ್ರೀಮತಿ ಉಷಾ ವಂದನಾರ್ಪಣೆ ಗೈದರು. ಎಲ್ಲಾ ಶಿಕ್ಷಕರು ಸಹಕರಿಸಿದರು.

Related posts

ಸಚಿವ ದಿನೇಶ್ ಗುಂಡೂರಾವ್‌ರಿಂದ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯ ಲೋಕಾರ್ಪಣೆ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರಕ್ಕೆ ಭಟ್ಟಾರಕರ ಸ್ವಾಮೀಜಿ ಭೇಟಿ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

Suddi Udaya

ಉಜಿರೆ: ಕುಂಟಿನಿ ಮದ್ರಸದ ವಿದ್ಯಾರ್ಥಿ ಶಾಝ್ಮಿ ಎಸ್.ಜೆ.ಎಮ್ ಉಜಿರೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಸವಣಾಲು : ರಿಕ್ಷಾಗೆ ಬೈಕ್ ಡಿಕ್ಕಿ: ಬೈಕ್‌ ಸವಾರ ಗಂಭೀರ ಗಾಯ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಯುವಸಿರಿ- ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ ಸುಮಾರು 500ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಗದ್ದೆಯಲ್ಲಿ ನೇಜಿನಾಟಿ

Suddi Udaya
error: Content is protected !!