24.8 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಮದ್ದಡ್ಕ: ಅಬಕಾರಿ ಅಧಿಕಾರಿಗಳ ದಾಳಿ: 250 ಗ್ರಾಂ ಗಾಂಜಾ ಹಾಗೂ 2 ಮೊಬೈಲ್‌ಗಳು ವಶ: ಆರೋಪಿ ಪರಾರಿ

ಮದ್ದಡ್ಕ: ಮದ್ದಡ್ಕದಲ್ಲಿ ಅಬಕಾರಿ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿ ದಾಳಿ ಮಾಡಲಾಗಿ, ಮನೆಯಲ್ಲಿ 2 ಪ್ಲಾಸ್ಟಿಕ್ ಡಬ್ಬದಲ್ಲಿ 250 ಗ್ರಾಂ ಗಾಂಜಾ ದೊರಕಿದ್ದು ಹಾಗೂ 2 ಮೊಬೈಲ್‌ಗಳನ್ನು ಜೂ.3ರಂದು ಜಪ್ತುಪಡಿಸಲಾಗಿದೆ.

ಪ್ರಕರಣದ ಆರೋಪಿತನಾದ ಮಹಮ್ಮದ್ ರಫೀಕ್ ಎಂಬುವನು ಪರಾರಿ ಆಗಿರುತ್ತಾನೆ, ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985 ರ ಕಲಂ 8C, 20(2)a ಹಾಗೂ 25 ರನ್ವಯ ಪ್ರಕರಣ ದಾಖಲಿಸಲಾಗಿರುತ್ತದೆ.

ದಾಳಿಯಲ್ಲಿ ಬಂಟ್ವಾಳ ಉಪ ವಿಭಾಗದ ನಿರೀಕ್ಷಕ ನವೀನ್ ಕುಮಾರ್, ಉಪನಿರೀಕ್ಷಕ ಗಿರೀಧರ ಮಜಕರ್ ಹಾಗೂ ಬೆಳ್ತಂಗಡಿ ವಲಯ ಕಚೇರಿಯ ನಿರೀಕ್ಷಕ ಲಕ್ಷ್ಮಣ ಉಪ್ಪಾರ, ಉಪ ನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಪೇದೆಗಳಾದ ಶ್ರೀನಿವಾಸ್, ಕೃಷ್ಣ ಅಗಸರ, ಭೋಜ, ವಿನೊಯ್ ವಾಹನ ಚಾಲಕ ಕೇಶವ್ ನಾಯ್ಕ, ನವೀನ್ ಭಾಗವಹಿಸಿರುತ್ತಾರೆ.

ಸದ್ರಿ ಪ್ರಕರಣವನ್ನು ನವೀನ ಕುಮಾರ್ ನಿರೀಕ್ಷಕರು ಬಂಟ್ವಾಳ ಉಪವಿಭಾಗ ದಾಖಲಿಸಿಕೊಂಡಿದ್ದು, ಸದ್ರಿ ಆರೋಪಿಯು ಹಳೆಯ ಆರೋಪಿಯಾಗಿದ್ದು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುತ್ತಾನೆ.

Related posts

ವೇಣೂರು: ನೂರುಲ್ ಹುಧಾ ಮಸೀದಿಯ ಸಿಬ್ಬಂದಿ ನಝೀರ್ ಹನೀಫಿರವರಿಗೆ ಉಮ್ರಾ ಯಾತ್ರೆಗೆ ಬಿಳ್ಕೋಡುಗೆ

Suddi Udaya

ಕೊಕ್ಕಡ: ಉಪ್ಪಾರಪಳಿಕೆ-ಉಪ್ಪಾರಹಳ್ಳ ರಸ್ತೆಗೆ ಕಾಂಕ್ರೀಟ್ ಹಾಕಿ ಶ್ರಮದಾನ

Suddi Udaya

ತೆಂಕಕಾರಂದೂರು: ಆಟೋ ರಿಕ್ಷಾ ಹಾಗೂ ಬೈಕ್ ಅಪಘಾತ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ರಾಜವರ್ಮ ಜೈನ್, ಉಪಾಧ್ಯಕ್ಷರಾಗಿ ಸುಮಿತ್ರಾ ಅವಿರೋಧವಾಗಿ ಆಯ್ಕೆ

Suddi Udaya

ಮುಂಡಾಜೆ ಸೋಮಂತಡ್ಕದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

Suddi Udaya

ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

Suddi Udaya
error: Content is protected !!