24.8 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಹೋರಿಯ ಕೊರಳಿಗೆ ನೈಲಾನ್‌ ಹಗ್ಗ ಕಟ್ಟಿ ಎಳೆದುಕೊಂಡು ಸಾಗಾಟ ಪ್ರಕರಣ: ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ : ಹೋರಿಯನ್ನು ಹಿಂಸಾತ್ಮಕ ರೀತಿಯಲ್ಲಿ ಕೊರಳಿಗೆ ನೈಲಾನ್‌ ಹಗ್ಗ ಕಟ್ಟಿ ಎಳೆದುಕೊಂಡು ಬರುತ್ತಿದ್ದ ಇಬ್ಬರು ಹಾಗೂ ಹೋರಿಯನ್ನು ಕೊಟ್ಟ ಒಬ್ಬ ಸೇರಿ ಮೂವರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಜೂ.4 ರಂದು ರಾತ್ರಿ ಉಜಿರೆ ಓಡಲ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಒಂದು ಹೋರಿಯ ಕೊರಳಿಗೆ ನೈಲಾನ್ ಹಗ್ಗವನ್ನು ಕಟ್ಟಿ ಹಿಂಸಾತ್ಮಕವಾಗಿ ಎಳೆದುಕೊಂಡು ಬರುತ್ತಿರುವುದನ್ನು ಗಮನಿಸಿದ ಬೆಳ್ತಂಗಡಿ ಠಾಣಾ . ಪಿ.ಎಸ್.‌ ಐ ಯಲ್ಲಪ್ಪ ಹೆಚ್‌ ಮಾದಾರ ಅವರು ಸದ್ರಿ ವ್ಯಕ್ತಿಗಳನ್ನು ವಿಚಾರಿಸಿದಾಗ ದೇವರಾಜ ಟಿ. ಹೆಚ್ ಮತ್ತು ತೇಜಸ್ ಎಂದು ತಿಳಿಸಿದ್ದರೆನ್ನಲಾಗಿದೆ. ಇವರಿಬ್ಬರಲ್ಲಿ ಹೋರಿಯನ್ನು ಕೊರಳಿಗೆ ನೈಲಾನ್ ಹಗ್ಗ ಕಟ್ಟೆ ಹಿಂಸಾತ್ಮಕವಾಗಿ ಎಳೆದು ಕೊಂಡು ಬರುತ್ತಿರುವ ಬಗ್ಗೆ ಮತ್ತು ನಿಗದಿತ ಪ್ರಾಧಿಕಾರಿಂದ ಪರವಾನಗಿ ಕೇಳಿದಾಗ , ಅಟೋ‌ ಚಾಲಕ ರಿಯಾಜ್‌ ಎಂಬವರು ಹೋರಿಯನ್ನು ಟಿ.ಬಿ. ಕ್ರಾಸ್‌ ಹತ್ತಿರ ಬಿಡಲು ಹೇಳಿರುತ್ತಾರೆ ಎಂದು ತಿಳಿಸಿದ್ದರು.

ನಿಗದಿತ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಅಥವಾ ದಾಖಲಾತಿ ಪಡೆಯದೆ ಹೋರಿಯನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೊರಳಿಗೆ ನೈಲಾನ್‌ ಹಗ್ಗ ಕಟ್ಟಿ ಮಾಂಸಕ್ಕಾಗಿ ಎಳೆದುಕೊಂಡು ಹೋಗಲು ಹೋರಿಯನ್ನು ಕೊಟ್ಟ ಆರೋಪಿ ರಿಯಾಝ್‌ , ಹಾಗೂ ಅಕ್ರಮವಾಗಿ ಮಾಂಸಕ್ಕಾಗಿ ಹಿಂಸಾತ್ಮಕವಾಗಿ ಎಳೆದುಕೊಂಡು ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ದೇವರಾಜ ಟಿ. ಹೆಚ್‌ ಮತ್ತು ತೇಜಸ್‌ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆ ಅಕ್ರ ನಂ : 44/2025 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಮತ್ತು ಕಲಂ:11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960ಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

Related posts

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಎಕ್ಸೆಲ್ ಟೆಕ್ನೊ ಸ್ಕೂಲ್ ವೇಣೂರಿಗೆ ಶೇ.100 ಫಲಿತಾಂಶ:ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ

Suddi Udaya

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಮೇ 25 : ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭ: ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು-ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಗೆ “ಜೊತೆಯಾಗಿ ಭವಿಷ್ಯವನ್ನು ಕಟ್ಟೋಣ” ಕಾರ್ಯಕ್ರಮ

Suddi Udaya

ಅ.3-12 : ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ

Suddi Udaya
error: Content is protected !!