25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಸೇವಾ ನಿವೃತ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಶಿಲದ ನಿವಾಸಿ ಜಯರಾಮ ನೆಲ್ಲಿತ್ತಾಯರವರು ಮಾರ್ಚ್ ನಲ್ಲಿ ನಿವೃತ್ತರಾಗಿದ್ದಾರೆ.

ಶಿಶಿಲ ಗ್ರಾಮದ ಶಿವರಾಯ ನೆಲ್ಲಿತ್ತಾಯ ಮತ್ತು ಸರಸ್ವತಿ ನೆಲ್ಲಿತ್ತಾಯರವರ ಪುತ್ರದಾರ ಅವರು ಶಿಶಿಲ ಹಾಗೂ ಅರಸಿನಮಕ್ಕಿಯಲ್ಲಿ ವಿಧ್ಯಾಭ್ಯಾಸ ಮುಗಿಸಿದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 1984ರ ಫೆಬ್ರವರಿ 4ರಂದು ಸೇರಿದರು. ಆರಂಭದಲ್ಲಿ ಸೇವಾನಿರತರಾಗಿ 16 ವರ್ಷ ಸೇವೆ ಸಲ್ಲಿಸಿ, ನಂತರ ಸೂಪರ್ ವೈಸರ್ ಆಗಿ 2.6 ವರ್ಷ, ಪ್ರೊಜೆಕ್ಟ್ ಆಫೀಸರ್ ಆಗಿ 4 ವರ್ಷ ಸೇವೆ ಸಲ್ಲಿಸಿದ ನಂತರ ನಿರ್ದೇಶಕರಾಗಿ ಭಡ್ತಿ ಹೊಂದಿ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದರು.

ಸಿಡಿಪಿ ಡಿವಿಷನ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನಂತರ ಪ್ರಾದೇಶಿಕ ನಿರ್ದೇಶಕರಾಗಿ ಸಂಪೂರ್ಣ ಸುರಕ್ಷದಲ್ಲಿ 2020ರಿಂದ 2022ರವರೆಗೆ ಸೇವೆ ಸಲ್ಲಿಸಿದರು. ಇದಾದ ನಂತರ ಪ್ರಾದೇಶಿಕ ನಿರ್ದೇಶಕರಾಗಿ ಮೈಸೂರು ವಲಯದಲ್ಲಿ ಸೇವೆ ಸಲ್ಲಿಸಿದ ಜಯರಾಮ ನೆಲ್ಲಿತ್ತಾಯರು ಕಳೆದ ಮಾರ್ಚ್ ನಲ್ಲಿ ನಿವೃತ್ತಿಯಾಗಿದ್ದಾರೆ. ಇವರು 41 ವರ್ಷಗಳ ಸುಧೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

Related posts

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ಮಡಂತ್ಯಾರಿನಲ್ಲಿ ಕ್ಲಾಸಿಕ್ ಮೆನ್ಸ್ ವೇರ್ ಶುಭಾರಂಭ

Suddi Udaya

ತಾಲೂಕಿನಲ್ಲಿ ಮುಂದುವರಿದ ಬೆಟ್ಟಿಂಗ್ ಭರಾಟೆ

Suddi Udaya

ಕೆ. ಹರೀಶ್ ಕುಮಾರ್ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರಕಾರ ಆದೇಶ

Suddi Udaya

ಧರ್ಮಸ್ಥಳ: ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಸಾವು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್‌.ಇ)ಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!