27.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹು ಕೋಟಿ ಹಗರಣ ಪ್ರಕರಣ: ಸೊಸೈಟಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 9 ಮಂದಿಯ ಆಸ್ತಿ ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ . ಬೆಳ್ತಂಗಡಿ ಈ ಸಂಘದ 2023-24 ರ ಸಾಲಿನ ಲೆಕ್ಕಪರಿಶೋಧನೆಯಲ್ಲಿ ನಡೆದಿದೆ ಎನ್ನಲಾದ ಬಹು ಕೋಟಿ ಹಗರಣದ ಬಗ್ಗೆ ಸಹಕಾರಿ ಸಂಘದ ಉಪ ನಿಬಂಧಕರು 2023-24 ರಲ್ಲಿ ಜವಬ್ದಾರಿಯಲ್ಲಿದ್ದ 15 ಮಂದಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದು, ಸೊಸೈಟಿಯ ಜವಾಬ್ದಾರಿ ವಹಿಸಿದ್ದ 9 ಮಂದಿಯ ಆಸ್ತಿಯನ್ನು ತೀರ್ಪು ಪೂರ್ವ ಜಪ್ತಿ ಮಾಡಿ ಜೂ‌.5 ರಂದು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯ ಆದೇಶ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.

ಜಪ್ತಿ ಪೂರ್ವ ಆಸ್ತಿ ಮುಟ್ಟುಗೋಳಿಗೆ ನೋಟಿಸ್ ಜಾರಿಯಾದವರ ವಿವರ:
ಅಧ್ಯಕ್ಷ ಸಿ.ಹೆಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ.ಆರ್.ನಾಯಕ್, ವಿಶ್ವನಾಥ, ಪ್ರಮೋದ್.ಆರ್.ನಾಯಕ್, ಪಿ.ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಚಂದ್ರಕಾಂತ್,ಸಿಬ್ಬಂದಿ ಸರಿತಾ ಸೇರಿ ಒಂಭತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ ಜೂ.5 ರಂದು ನೋಟಿಸ್ ಜಾರಿಯಾಗಿದೆ.

ನಗದು ಠೇವಣಿ ಇಡಲು ಅವಕಾಶ: ಒಂದು ವೇಳೆ ಜಪ್ತಿ ಪೂರ್ವ ಜಪ್ತಿ ಆದೇಶವನ್ನು ತೆರವುಗೊಳಿಸಲು ಬಯಸಿದಲ್ಲಿ ಜೂ‌.20 ರ ಒಳಗೆ ರೂ.30,45,24,278( ಮೂವತ್ತು ಕೋಟಿ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು) ನಗದು ಭದ್ರತೆಯಾಗಿ ಈ ನ್ಯಾಯಾಲಯದ ಪಿ.ಡಿ ಖಾತೆಯಲ್ಲಿ ನಿಗದಿತ ಅವಧಿಯೊಳಗೆ ಠೇವಣಿ ಇರಿಸತಕ್ಕದ್ದು ಇಲ್ಲವಾದರೆ ಆಸ್ತಿ ಮುಟ್ಟುಗೋಳು ಹಾಕಲಾಗುವುದಾಗಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಪ್ರಮುಖ ಆದೇಶ:, ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ನೀಡಿರುವ ಆದೇಶದಲ್ಲಿ ಚರಾಸ್ತಿಯನ್ನು ಷರತ್ತಿಗೆ ಒಳಪಟ್ಟು ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ ಹೊರಡಿಸಿರುತ್ತೇನೆ. ಒಂದು ವೇಳೆ ಈ ಆದೇಶವನ್ನು ಅತಿಕ್ರಮಿಸಿ ಯಾರದರೂ ಜಪ್ತಿಗೊಳಪಟ್ಟ ಈ ಕೆಳಕಂಡ ಚರಾಸ್ತಿಯನ್ನು ಖರೀದಿಸಿದ್ದಲ್ಲಿ ಅಂತಹ ಹೊಣೆಗಾರಿಕೆಗೆ ಖರೀದಿಸಿದವರೇ ಸಂಪೂರ್ಣ ಹೊಣೆಗಾರರು ಆಗಿರುತ್ತಾರೆ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಿದ್ದಾರೆ.

Related posts

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya

ಮುಂಡಾಜೆ: ಚಾಮುಂಡಿನಗರ ಸ.ಕಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಬೆಳ್ತಂಗಡಿ ಶೋರೂಂ ನಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯ ಗೆದ್ದ ಅದೃಷ್ಟವಂತರು

Suddi Udaya

ಅ.2: ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿರುವ ನಿವೃತ್ತ ಯೋಧ ಮಂಜುನಾಥ ಹಾಗೂ “ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಪುರಸ್ಕೃತ ವಿ.ಕೆ. ವಿಟ್ಲ ರವರಿಗೆ ನಾಗರಿಕ ಅಭಿನಂದನಾ ಸಮಾರಂಭ:ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಪಂಜ: ವಲಯ ಅರಣ್ಯಾಧಿಕಾರಿಯಾಗಿ ಬೆಳ್ತಂಗಡಿಯ ಶ್ರೀಮತಿ ಸಂಧ್ಯಾ ಅಧಿಕಾರ ಸ್ವೀಕಾರ

Suddi Udaya
error: Content is protected !!