32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ಮುಂಡಾಜೆ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ‌ ಬಕ್ರೀದ್ ಆಚರಣೆ-ಸಾಮೂಹಿಕ ಪ್ರಾರ್ಥನೆ

ಬೆಳ್ತಂಗಡಿ: ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಅದ್‌ಹಾ (ಬಕ್ರೀದ್) ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆ ಮಸ್ಜಿದ್ ನಲ್ಲಿ ಧರ್ಮ ಗುರುಗಳಾದ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ಈದ್ ಸಂದೇಶ ನೀಡಿದರು‌. ಬಳಿಕ ಸಾಮೂಹಿಕ ಈದ್ ನಮಾಝ್ ನಡೆಯಿತು.

“ಖುತುಬಾ” ಪಾರಾಯಣ ಬಳಿಕ, ಜಮಾಅತ್ ನಲ್ಲಿ ಮೃತರಾದವರ ಸ್ಮರಣೆಗಾಗಿ ಸಾಮೂಹಿಕವಾಗಿ “ಯಾಸೀನ್” ಪಾರಾಯಣ ನಡೆದು ದುಆ ಪ್ರಾರ್ಥನೆ ಸಲ್ಲಿಸಲಾಯಿತು. ಮಸ್ಲಕ್ ಮದರಸದ ಮುಖ್ಯೋಪಾಧ್ಯಾಯ ತ್ವಾಹಿರ್ ಸ‌ಅದಿ ತಕ್ಬೀರ್ ಗೇ ನೇತೃತ್ವ ನೀಡಿದರು.

ಮಸ್ಜಿದ್ ನಿರ್ಮಿಸಲ್ಪಟ್ಟಿರುವ ಜಮಲುಲ್ಲೈಲಿ ತಂಙಳ್ ಕುಟುಂಬದ ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್, ‌ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಶೀರ್ ನೆಕ್ಕರೆ, ಕಾರ್ಯಾಧ್ಯಕ್ಷ ಕೆರೀಂ ಕೆ.ಎಸ್, ಪ್ರ. ಕಾರ್ಯದರ್ಶಿ ಅಬ್ಬಾಸ್ ಸಿ, ಕೋಶಾಧಿಕಾರಿ ಕೆರೀಂ ಕುರುಡ್ಯ ಹಾಗೂ ಪದಾಧಿಕಾರಿಗಳು, ‌ಜಮಾಅತ್ ಬಾಂಧವರು ಭಾಗವಹಿಸಿದ್ದರು.

ಪ್ರಾರ್ಥನೆ ಬಳಿಕ ಎಲ್ಲರೂ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಖುಷಿ ಹಂಚಿಕೊಂಡರು. ಪಾನೀಯ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.

Related posts

ಬೆಳ್ತಂಗಡಿಯ ಶ್ರೀರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವ : ಧಾರ್ಮಿಕ ಸಭೆ

Suddi Udaya

ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರ 17ನೇ ವಷ೯ದ ಪಟ್ಟಾಭಿಷೇಕ ವರ್ಧಂತಿ

Suddi Udaya

ಪಿಲಿಚಂಡಿಕಲ್ಲು ನಿವಾಸಿ ಶೇಕ್ ಇಮಾಮ್ ಸಾಹೇಬ್ ಮನೆಗೆ ಬಡಿದ ಸಿಡಿಲು: ಸುಟ್ಟು ಹೋದ ಮನೆಯ ವಿದ್ಯುತ್ ಸಂಪರ್ಕ, ಮನೆಯ ಗೋಡೆಗಳಿಗೆ ಹಾನಿ

Suddi Udaya

ಜ.15: ಮಾಜಿ ಶಾಸಕ ವಸಂತ ಬಂಗೇರರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

Suddi Udaya

ಅಳದಂಗಡಿ ಅರಮನೆಗೆ ಶಿಲಾಮಯ ಆನೆಗಳ ಮೆರುಗು: ಪ್ರಸಿದ್ಧ ಬೆಂಗಳೂರು ಉದ್ಯಮಿ ದೇವೇಂದ್ರ ಹೆಗ್ಡೆಯವರಿಂದ ಕೊಡುಗೆ

Suddi Udaya

ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ

Suddi Udaya
error: Content is protected !!