27.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ವರದಿ

ಉಜಿರೆಯ ಮೂರು ಅಂಗಡಿಗಳಿಗೆ ಕನ್ನ ಶಟ‌ರ್ ಬೀಗ ಮುರಿದು ನಗದು ಕಳ್ಳತನ

ಉಜಿರೆ: ಉಜಿರೆ ಜನಾರ್ದನ ದೇವಸ್ಥಾನದ ದ್ವಾರದ ಬಳಿಯಿರುವ ಮೂರು ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಹಣ ಕಳ್ಳತನ ಮಾಡಿದ ಘಟನೆ ಜೂ.7 ರಂದು ರಾತ್ರಿಯ ವೇಳೆ ನಡೆದಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂರು ಅಂಗಡಿಯ ಶಟರ್ ಗೆ ಹಾಕಿದ್ದ ಬೀಗಕ್ಕೆ ಸುತ್ತಿಗೆಯಿಂದ ಮುರಿದು ಒಳನುಗ್ಗಿ ಒಟ್ಟು 38 ಸಾವಿರ ರೂಪಾಯಿ ಹಣ ಕಳ್ಳತನ ಮಾಡಲಾಗಿದೆ.

ಬಾಲಾಜಿ ಎಂಟ‌ರ್ ಪ್ರೈಸ್ ನಿಂದ 30 ಸಾವಿರ ನಗದು, ಮಧುರ ಎಂಟರ್ ಪ್ರೈಸ್ ನಿಂದ 6 ಸಾವಿರ ರೂಪಾಯಿ, ಗಣೇಶ್ ಇಲೆಕ್ನಿಕಲ್ ನಿಂದ 2 ಸಾವಿರ ರೂಪಾಯಿ ಕಳ್ಳತನ ಮಾಡಲಾಗಿದೆ ಎಂದು ಬಾಲಾಜಿ ಅಂಗಡಿ ಮಾಲೀಕ ಹರೀಶ್ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಜೂ.8 ರಂದು ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುಬ್ಬಪುರ್ ಮಠ ಮತ್ತು ಸಿಬ್ಬಂದಿ ಹಾಗೂ ಮಂಗಳೂರಿನಿಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಡಿ.17: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಿರುಸಿನ ಪೈಪೋಟಿ: ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್, 12 ಸ್ಥಾನಕ್ಕೆ 24 ನಾಮಪತ್ರ ಸಲ್ಲಿಕೆ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ನಿಡ್ಲೆ: ರಸ್ತೆಗೆ ಮರದ ಗೆಲ್ಲು ಬಿದ್ದು ಸಂಚಾರ ಅಸ್ತವ್ಯಸ್ಥ

Suddi Udaya

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ : ಮುಂಡಾಜೆಯ ತೇಜಲ್ ಕೆ .ಆರ್ ರವರಿಗೆ ಬೆಳ್ಳಿಯ ಪದಕ

Suddi Udaya

ಆರಂಬೋಡಿ: ಕುದುಂಬುಡ -ಕೊಮ್ಮಡ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಅಭಿನಂದನೆ

Suddi Udaya

ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

Suddi Udaya
error: Content is protected !!