23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆದ್ರಬೆಟ್ಟು ರಿಫಾಯಿಯ್ಯ ಜುಮಾ ಮಸ್ಜಿದ್‌ನಲ್ಲಿ ಬಕ್ರೀದ್ ಆಚರಣೆ

ಬೆಳ್ತಂಗಡಿ: ರಿಫಾಯಿಯ್ಯ ಜುಮಾ ಮಸ್ಜಿದ್‌ನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಸೌಹಾರ್ದ ಸಂದೇಶ ಭಾಷಣದೊಂದಿಗೆ ಜೂ.7ರಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.

ಸಂದೇಶ ಭಾಷಣ ಮಾಡಿದ ಖತೀಬ್ ಉಸ್ತಾದ್ ಅಬೂ ರಬೀಹ್ ಶರೀಫ್ ಸಖಾಫಿ ಉಜಿರ್ಬೆಟ್ಟು ಸರ್ವ ಧರ್ಮೀಯರಲ್ಲಿ ಸ್ನೇಹ ಸಹಬಾಳ್ವೆಯ ಜೀವನದ ನಡೆಸುವುದು ಕಾಲದ ಬೇಡಿಕೆ.ಪವಿತ್ರ ಇಸ್ಲಾಂ ಧರ್ಮ ಯಾವತ್ತೂ ಸೌಹಾರ್ದತೆ, ಸ್ನೇಹ, ಐಕ್ಯತೆಗೆ ಪ್ರಾಧಾನ್ಯತೆ ನೀಡಿದೆ.ಇತರ ಯಾವುದೇ ಧರ್ಮೀಯರ ಮನಸ್ಸು ನೋಯಿಸುವ ಯಾವುದೇ ರೀತಿಯ ತಪ್ಪು ಸಂದೇಶದಿಂದ ಯುವಕರು ದೂರವಿರಬೇಕು ಎಂದರು.

ಬೆದ್ರಬೆಟ್ಟು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಿ.ಸಲೀಂ, ಗೌರವಾಧ್ಯಕ್ಷ ಹಸನಬ್ಬ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್, ಕೋಶಾಧಿಕಾರಿ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿ ಸಿರಾಜುದ್ದೀನ್, ಸಮಿತಿ ಸದಸ್ಯರು, ಊರಿನ ಉಲಮಾ ಉಮರಾ ನಾಯಕರು, ಹಿರಿಯರು, ಯುವಕರು, ಕಿರಿಯರು ಭಾಗಿಯಾದರು.

ಸುನ್ನೀ ಬಾಲಸಂಘ SಃS ವಿದ್ಯಾರ್ಥಿಗಳು ಈದ್ ಶುಭಾಷಯ ಕಾರ್ಡನ್ನು ಸಿಹಿಯೊಂದಿಗೆ ಎಲ್ಲರಿಗೂ ಹಂಚಿ ವಿಶೇಷ ರೀತಿಯ ಬಕ್ರೀದ್ ಹಬ್ಬ ಆಚರಣೆಯಲ್ಲಿ ಭಾಗಿಯಾದರು.

Related posts

ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Suddi Udaya

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವತಂತ್ರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಮತದಾನ ಕೇಂದ್ರಕ್ಕೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!